ಕುಕ್ಕೆ ಸುಬ್ರಮಣ್ಯ: ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲದ 18 ವರ್ಷ ವಯಸ್ಸಿನ ಆನೆ ಯಶಸ್ವಿನಿಗೆ ಅರಣ್ಯ ಇಲಾಖೆಯಿಂದ ದೇವಸ್ಥಾನದ ಹೆಸರಿಗೆ ಮಾಲೀಕತ್ವ ಪ್ರಮಾಣ ಪತ್ರ ದೊರೆತಿರುವುದಾಗಿ ತಿಳಿದು ಬಂದಿದೆ.
ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿಗೆ ಮಾಲಿಕತ್ವ ಪ್ರಮಾಣ ಪತ್ರ ಕಳೆದ ಸುಮಾರು 18 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಈ ಆನೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳವರೆಗೆ ಮಾಲೀಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿಗೆ ಮಾಲಿಕತ್ವ ಪ್ರಮಾಣ ಪತ್ರ ಕೆಲ ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ ಆನಂದ ಸಿಂಗ್ ಅವರು ಈ ಆನೆಯನ್ನು ಕೊಡಮಾಡಿದ್ದರು. ಅರಣ್ಯ ಇಲಾಖೆಯಿಂದ ಲಭ್ಯವಾಗುವ ಈ ಅನುಮತಿ ಪತ್ರಕ್ಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಅವರು ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ.
ಓದಿ:ಕಾಡಿನಿಂದ ಬಂದ ಆನೆಯೊಂದನ್ನು ಮರಳಿ ಕಾಡಿಗಟ್ಟಿದ ನಾಯಿಗಳು.. ವಿಡಿಯೋ