ಮಂಗಳೂರು: ಕೊವಿಡ್ -19 ವಿಶ್ವವ್ಯಾಪಿಯಾಗಿರುವ ಕಾರಣ, ಅದರ ಕುರಿತು ಜಾಗೃತಿ ಮೂಡಿಸಲು ಯಕ್ಷಗಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊರೊನಾಸುರ ವಧೆ ಯಕ್ಷಗಾನದ ದೃಶ್ಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಈ ಪ್ರಸಂಗದ ರೂವಾರಿಯಾಗಿದ್ದಾರೆ. ಯಕ್ಷಗಾನ ಮೂಲಕ ಮಾರಕ ರೋಗ ಕೊರೊನಾ ವಿರುದ್ದ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಸಂಪೂರ್ಣ ಸಹಕಾರವನ್ನು ಗಣೇಶ ಕಲಾವೃಂದ ಪೈವಳಿಕೆ, (ದೇವಕಾನ) ನೀಡಿದೆ.
ಪದ್ಯರಚನೆ- ಶ್ರೀಧರ ಡಿ.ಯಸ್., ಪ್ರೊ ಎಂ.ಎ.ಹೆಗಡೆ, ಸಲಹೆ ಹಾಗು ಮಾರ್ಗದರ್ಶನ- ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ. ಸದಸ್ಯ ಯೊಗೀಶ ರಾವ್ ಚಿಗುರುಪಾದೆ ಪ್ರತಿಫಲಾಪೇಕ್ಷೆ ಇಲ್ಲದೆ, ಸಾಮಾಜಿಕವಾದ ಬದ್ಧತೆಯಿಂದ ಯಕ್ಷಗಾನ ಕಲಾ ವಲಯದ ಪ್ರತಿನಿಧಿಗಳಾಗಿ ಉದಾರಭಾವದಿಂದ ಭಾಗವಹಿಸಿ ನಮ್ಮ ಪ್ರಯತ್ನಕ್ಕೆ ಕಲಾವಿದರು ಸಹಕರಿಸಿದ್ದಾರೆ ಎಂದು ಮಯ್ಯ ತಿಳಿಸಿದ್ದಾರೆ.
ಕೊರೊನಾಸುರ ವಧೆ ಯಕ್ಷಗಾನ ಪ್ರದರ್ಶನ ಕೊರೊನಾಸುರ ಎಂಬವನು ಆವರಿಸಿಕೊಳ್ಳುವುದು ಮತ್ತು ಅವನನ್ನು ಧನ್ವಂತರಿ ವಧಿಸುವ ಕಾಲ್ಪನಿಕ ಕತೆಯೊಂದನ್ನು ಸಿದ್ಧಪಡಿಸಿ ರಸಪೂರ್ಣವಾಗಿ ಪ್ರಸಂಗ ಹೆಣೆಯಲಾಗಿದೆ.