ಕರ್ನಾಟಕ

karnataka

ETV Bharat / state

ಯಕ್ಷಗಾನದ ಚೌಕಿಯಲ್ಲೇ ಕುಸಿದು ಬಿದ್ದು ಚೌಕಿ ಸಹಾಯಕ ಹೃದಯಾಘಾತದಿಂದ ಸಾವು - Kateelu Sri Durgaparameshwari Yakshagana Mandal

ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಐದನೇ ಮೇಳದಲ್ಲಿ ಯಕ್ಷಗಾನ ಚೌಕಿ (ಗ್ರೀನ್ ರೂಮ್)ನಲ್ಲಿ ಸಹಾಯಕರಾಗಿದ್ದ ಅಚ್ಯುತ ನಾಯಕ್ (45) ಸಾವನ್ನಪ್ಪಿದ್ದಾರೆ.

Achyuta Nayak
ಅಚ್ಯುತ ನಾಯಕ್

By

Published : Dec 6, 2022, 8:42 PM IST

Updated : Dec 6, 2022, 9:20 PM IST

ಬಂಟ್ವಾಳ:ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಐದನೇ ಮೇಳದ ಚೌಕಿಯಲ್ಲಿ ಸಹಾಯಕರಾಗಿದ್ದ ಅಚ್ಯುತ ನಾಯಕ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೋಮವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಬಂಟ್ವಾಳದ ಪಲ್ಲಮಜಲು ಎಂಬಲ್ಲಿ ಯಕ್ಷಗಾನ ಪ್ರದರ್ಶನ ಮುಗಿದ ಬಳಿಕ ಪರಿಕರಗಳನ್ನು ಜೋಡಿಸಿಡುವಾಗ ಅವರು ಕುಸಿದು ಬಿದ್ದಿದ್ದರು.

ಪ್ರದರ್ಶನ ಮುಗಿದ ಬಳಿಕ ಪರಿಕರಗಳನ್ನು ವಾಹನಕ್ಕೆ ಲೋಡ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆಯೇ ಸಾವನ್ನಪ್ಪಿದ್ದಾರೆ. ಅವರು ಮಣಿನಾಲ್ಕೂರು ಬಳಿಯ ಕೊಡಂಗೆ ನಿವಾಸಿಯಾಗಿದ್ದಾರೆ. ಅಚ್ಯುತ ನಾಯಕ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ:ಬೀದಿ ಬದಿಯಲ್ಲಿ ಸಿಕ್ಕಿತು ಲಕ್ಷ ಗಟ್ಟಲೆ ಹಣ : ಅರ್ಧ ಗಂಟೆಯಲ್ಲಿ ಕೈತಪ್ಪಿದು ಹೀಗೆ...

Last Updated : Dec 6, 2022, 9:20 PM IST

ABOUT THE AUTHOR

...view details