ಮಂಗಳೂರು :ಯಕ್ಷಗಾನ ವೇಷಧಾರಿಯೊಬ್ಬರು ರಂಗಸ್ಥಳದಲ್ಲಿ ಪಾತ್ರ ಮಾಡುತ್ತಿರುವಾಗಲೇ ತಲೆತಿರುಗಿ ಬಿದ್ದಿರುವ ಘಟನೆ ನಿನ್ನೆ ಮೂಡುಬಿದಿರೆ ತಾಲೂಕಿನ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿದೆ.
ಯಕ್ಷಗಾನದ ಖ್ಯಾತ ಕಲಾವಿದ ಮೋಹನ ಕುಮಾರ್ ಅಮ್ಮುಂಜೆಯವರು 'ಕರ್ಣಪರ್ವ'ದ 'ಅರ್ಜುನ' ಪಾತ್ರಧಾರಿಯಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರ 'ಕರ್ಣ' ಪಾತ್ರಧಾರಿಯಾಗಿ ಮುಖಾಮುಖಿಯಾಗಿದ್ದರು. ಅರ್ಜುನ - ಕರ್ಣ ಪಾತ್ರಗಳ ಮಾತಿನ ಸಮರವಾಗಿ ಕರ್ಣನ ವೀರರಸದ ಪದ್ಯಕ್ಕೆ ಗಣೇಶ ಶೆಟ್ಟಿ ಕನ್ನಡಿಕಟ್ಟೆಯವರು ಕುಣಿಯಲು ಆರಂಭಿದ್ದಾರೆ.
ಈ ಸಂದರ್ಭದಲ್ಲಿ ಸ್ವಲ್ಪ ಓಲಾಡುವಂತೆ ಆದ ಅರ್ಜುನ ಪಾತ್ರಧಾರಿ ಮೋಹನ ಕುಮಾರ್ ಅಮ್ಮುಂಜೆಯವರು, ಏಕಾಏಕಿ ಎರಡು ಹೆಜ್ಜೆ ಮುಂದೆ ಬಂದು ಮುಗ್ಗರಿಸಿ ಬಿದ್ದಿದ್ದಾರೆ. ರಂಗಸ್ಥಳದಲ್ಲಿದ್ದ ಹಿಮ್ಮೇಳ ಮುಮ್ಮೇಳದ ಕಲಾವಿದರು ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ತಿಳಿಯದೆ ಗಾಬರಿ ಬಿದ್ದಿದ್ದಾರೆ.