ಉಳ್ಳಾಲ (ದಕ್ಷಿಣ ಕನ್ನಡ): ಮೊಗವೀರಪಟ್ಣ ಸಮುದ್ರ ತೀರದಲ್ಲಿ ಇಂದು, ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದ ವತಿಯಿಂದ 87 ನೇ ವರ್ಷದ ಸಮುದ್ರ ಪೂಜೆ ನಡೆಯಿತು.
ಉಳ್ಳಾಲದಲ್ಲಿ ಸಮುದ್ರ ರಾಜನಿಗೆ ಫಲವಸ್ತು, ಹಾಲು ಅರ್ಪಿಸಿ ಪೂಜೆ - ಮೊಗವೀರಪಟ್ಣ ಸಮುದ್ರ ತೀರ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮೊಗವೀರಪಟ್ಣ ಸಮುದ್ರ ತೀರದಲ್ಲಿ, ಇಂದು 87 ನೇ ವರ್ಷದ ಸಮುದ್ರ ಪೂಜೆ ನಡೆಯಿತು.
ಉಳ್ಳಾಲದಲ್ಲಿ ಸಮುದ್ರರಾಜನಿಗೆ ಪೂಜೆ
ಶ್ರೀ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನ, ಮತ್ತು ಉಳ್ಳಾಲ ಮೊಗವೀರ ಸಂಘದ ಸಹಯೋಗದಲ್ಲಿ ಶ್ರೀ ವಿಠೋಭ ಭಜನಾ ಮಂದಿರದಲ್ಲಿ ಸೂರ್ಯೋದಯದಿಂದ ಭಜನೆಯನ್ನು ಪ್ರಾರಂಭಿಸಿ, ನಂತರ ಶ್ರೀ ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಜನೆಯೊಂದಿಗೆ ಸಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಅಲ್ಲಿಂದ ಮೊಗವೀರಪಟ್ಣದ ಸಮುದ್ರ ಕಿನಾರೆಯಲ್ಲಿ ಮಂಗಳಾರತಿಯೊಂದಿಗೆ ಪೂಜೆಯನ್ನು ನೆರವೇರಿಸಿ ಸಮುದ್ರ ರಾಜನಿಗೆ ಫಲವಸ್ತು, ಹಾಲು ಅರ್ಪಿಸಲಾಯಿತು.