ಕರ್ನಾಟಕ

karnataka

ETV Bharat / state

ಡಿ.ಕೆ‌.ಶಿವಕುಮಾರ್ ಬಿಡುಗಡೆಗಾಗಿ ಮಂಗಳೂರಿನಲ್ಲಿ ವಿಶೇಷ ಹೋಮ,ಪ್ರಾರ್ಥನೆ - Worship in Dakshinakannad district for Dks

ಇಡಿ ವಶದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್​ ಬೇಲ್​ ಸಿಗಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್​ನಿಂದ ಹೋಮ ಹವನ ನಡೆಸಲಾಯಿತು.

ಡಿ.ಕೆ‌.ಶಿವಕುಮಾರ್ ಬಿಡುಗಡೆಗಾಗಿ ಮಂಗಳೂರಿನಲ್ಲಿ ವಿಶೇಷ ಹೋಮ,ಪ್ರಾರ್ಥನೆ

By

Published : Sep 17, 2019, 8:57 PM IST

ಮಂಗಳೂರು: ಇಡಿ ಬಲೆಯಲ್ಲಿ ಸಿಲುಕಿರುವ ಮಾಜಿ ಸಚಿವ ಡಿ.ಕೆ‌.ಶಿವಕುಮಾರ್ ಬಿಡುಗಡೆಗೆ ಪ್ರಾರ್ಥಿಸಿ ಡಿಕೆಶಿ ಅಭಿಮಾನಿ ಬಳಗ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಡಿ.ಕೆ‌.ಶಿವಕುಮಾರ್ ಬಿಡುಗಡೆಗಾಗಿ ಮಂಗಳೂರಿನಲ್ಲಿ ವಿಶೇಷ ಹೋಮ,ಪ್ರಾರ್ಥನೆ

ಡಿಕೆಶಿ ಸಂಕಷ್ಟ ನಿವಾರಣೆಯಾಗಿ ಆರೋಗ್ಯ ಸುಧಾರಣೆ ಆಗಬೇಕು. ಬೇಗನೆ ಜಾಮೀನು ದೊರೆತು ಬಿಡುಗಡೆಯಾಗಬೇಕು ಎಂದು ಪ್ರಾರ್ಥಿಸಿ ಹೋಮ ಮಾಡಲಾಯಿತು. ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ಹನ್ನೆರಡು ಕಾಯಿಯ ಗಣಪತಿ ಹೋಮ ನಡೆಯಿತು.

ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ನ್ಯಾಯ ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹೋಮ ಹವನ ನಡೆಸಿದರು.

For All Latest Updates

TAGGED:

ABOUT THE AUTHOR

...view details