ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ “ನನ್ನ ಜೀವನ-ಯೋಗ ಜೀವನ”, "ಮನೆಯೇ ಮೊದಲ ಯೋಗ ಚಾವಡಿ” ಸದೃಢ - ಸಶಕ್ತ - ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ಉಜಿರೆ ಅತ್ತಾಜೆ ಕೇಶವ ಭಟ್ ಮನೆಯಲ್ಲಿ 6 ನೇ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು.
ಯೋಗಾಭ್ಯಾಸದಿಂದ ನಮ್ಮ ದೇಹದಲ್ಲಿ ಸಹಜ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ವಿಶ್ವದೆಲ್ಲೆಡೆ ಸಂಭವಿಸುತ್ತಿರುವ ವೈಜ್ಞಾನಿಕ ತಾಂತ್ರಿಕ ಬೆಳವಣಿಗೆಯಿಂದ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದ್ದು, ಮಾನವರು ಮಾನವೀಯ ಮೌಲ್ಯಗಳನ್ನು ಮರೆತು ಯಾಂತ್ರಿಕರಾಗಿದ್ದಾರೆ. ಈ ಯಾಂತ್ರಿಕ ಯುಗದ ಕೊಡುಗೆಯೇ "ಒತ್ತಡ" ತನ್ನ ಮೂಲಕ ಆರೋಗ್ಯದಲ್ಲಿ ಏರು ಪೇರು ಮಾನಸಿಕ ಅಸ್ವಸ್ಥತೆ ಇಂದಿನ ಪ್ರಪಂಚದ ಯಾಂತ್ರಿಕ ನೋಟ, ವಿಜ್ಞಾನ ತಂತ್ರಜ್ಞಾನ ಜೀವನಶೈಲಿ ಇತ್ಯಾದಿಗಳು ಅವೆಲ್ಲಕ್ಕಿಂತ ಪವಿತ್ರವಾದ ಸತ್ಯವಾದ ದಿವ್ಯವಾದ ಆರೋಗ್ಯ ಪೂರ್ಣ ಬದುಕಿನೆಡೆಗೆ ಬದಲಾಗಬೇಕಿದೆ. ಪಂಚ ಭೂತಗಳಿಂದ ರೂಪುಗೊಂಡ ಈ ಶರೀರವನ್ನು ಸದೃಢವಾಗಿಸಲು ಒತ್ತಡ ನಿಭಾಯಿಸಿ ಮಾನಸಿಕ ಕ್ಷಮತೆಯನ್ನು ಪಡೆಯಲು ಸುಲಭ ಮತ್ತು ಸರಳ ವಿಧಾನವೇ ಯೋಗವಾಗಿದೆ.