ಕರ್ನಾಟಕ

karnataka

ETV Bharat / state

ಮಂಗಳೂರು: ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿದ ಕಾರ್ಮಿಕ ಮಹಿಳೆ ಸಾವು, ಮಗು ಪಾರು

ಮಂಗಳೂರಿನ ಹೊರವಲಯದಲ್ಲಿ ಜಲಸಿರಿ ಯೋಜನೆ ಕಾಮಗಾರಿ ವೇಳೆ ತಡೆಗೋಡೆ ಕುಸಿತಗೊಂಡ ಪರಿಣಾಮ ಕಾರ್ಮಿಕ ಮಹಿಳೆ ಮಣ್ಣಿನಡಿ ಸಿಲುಕಿಕೊಂಡು ಸಾವಿಗೀಡಾಗಿದ್ದಾರೆ. ಈ ವೇಳೆ ಮಗು ಪಾರಾಗಿದೆ.

working-woman-injured-in-retaining-wall-incident
ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿದ ಕಾರ್ಮಿಕ ಮಹಿಳೆ

By

Published : Dec 12, 2021, 6:25 AM IST

Updated : Dec 12, 2021, 7:58 AM IST

ಮಂಗಳೂರು:ನಗರದ ಹೊರವಲಯದಲ್ಲಿರುವ ಬೊಂದೇಲ್ ಕೃಷ್ಣ ನಗರ ಎಂಬಲ್ಲಿ ತಡೆಗೋಡೆ ಕುಸಿತಗೊಂಡು ಆಂಧ್ರ ಮೂಲದ ಕಾರ್ಮಿಕ ಮಹಿಳೆ ತಿಮ್ಮಕ್ಕ (42) ಮಣ್ಣಿನಡಿ ಸಿಲುಕಿಕೊಂಡು ಸಾವಿಗೀಡಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಮಗು ಅಪಾಯದಿಂದ ಪಾರಾಗಿದೆ.

ಕೃಷ್ಣನಗರದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿದ್ದ ಜಲಸಿರಿ ಯೋಜನೆ ಕಾಮಗಾರಿ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾಮಗಾರಿ ನಡೆಯುತ್ತಿದ್ದ ವೇಳೆಯೇ ಏಕಾಏಕಿ ತಡೆಗೋಡೆ ಕುಸಿದು ಬಿದ್ದಿದೆ. ಪರಿಣಾಮ ಆಂಧ್ರ ಮೂಲದ ಕಾರ್ಮಿಕ ಮಹಿಳೆ ತಿಮ್ಮಕ್ಕ ಮಣ್ಣಿನಡಿಯಲ್ಲಿ ಹೂತು ಗಂಭೀರವಾಗಿ ಗಾಯಗೊಂಡಿದ್ದರು.

ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮಹಿಳೆ ಸಾವು

ಸ್ಥಳದಲ್ಲಿ ಇದ್ದ ಜೆಸಿಬಿ, ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಣ್ಣಿನಡಿಯಿಂದ ತಿಮ್ಮಕ್ಕ ಹಾಗೂ ಮಗುವನ್ನು ಮೇಲೆತ್ತಲಾಗಿತ್ತು. ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಲಾರಿಯ ಇಂಜಿನ್​ ಬಳಿ ಬಚ್ಚಿಟ್ಟು 8 ಕೆಜಿ ಚಿನ್ನ ಕಳ್ಳಸಾಗಾಟ: ಇಬ್ಬರ ಬಂಧನ

Last Updated : Dec 12, 2021, 7:58 AM IST

ABOUT THE AUTHOR

...view details