ಮಂಗಳೂರು:ಬಾವಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮುಲ್ಕಿ ಸಮೀಪದ ಕೊಲಕಾಡಿ ಎಂಬಲ್ಲಿ ನಡೆದಿದೆ. ಕೊಲಕಾಡಿ ನಿವಾಸಿ ರತ್ನಾಕರ್ ಆಚಾರ್ಯ ಎಂಬುವವರ ಪತ್ನಿ ಶಶಿ ಆರ್.ಆಚಾರ್ಯ (55) ಮೃತ ಮಹಿಳೆಯಾಗಿದ್ದಾರೆ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಂಗಳೂರು: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ - woman suicide
ಮುಲ್ಕಿ ಸಮೀಪ ಹಳೆಯ ಬಾವಿಗೆ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಮೀಪದ ಕೊಲಕಾಡಿ ನಿವಾಸಿ ಶಶಿ ಆರ್ ಆಚಾರ್ಯ ಮೃತ ಮಹಿಳೆ ಎಂದು ತಿಳಿದುಬಂದಿದೆ.
ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ
ಭಾನುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಹುಡುಕಾಟ ನಡೆಸಿದಾಗ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಆಪದ್ಬಾಂಧವ ಆಸಿಫ್ ನೇತೃತ್ವದ ಕಾರ್ನಾಡು ಮೈಮುನಾ ಫೌಂಡೇಶನ್ ಸಿಬ್ಬಂದಿ ಮುಸ್ತಕ್ ಮತ್ತು ದಾವೂದ್ ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದರು.
ಯಾವುದೇ ಸುರಕ್ಷತೆ ಇಲ್ಲದ ಹಳೆಯ ಬಾವಿ ಇದಾಗಿದೆ. ಪತಿ ರತ್ನಾಕರ್ ಆಚಾರ್ಯ ಹಾಗೂ ಶಶಿ ಆರ್.ಆಚಾರ್ಯ ದಂಪತಿ ಮಾತ್ರವೇ ವಾಸವಿದ್ದು, ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರದು ಬಡತನದ ಕುಟುಂಬವಾಗಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.