ಕರ್ನಾಟಕ

karnataka

ETV Bharat / state

ಓಎಲ್ಎಕ್ಸ್​ನಲ್ಲಿ ಗ್ರೈಂಡರ್ ಮಾರಲು ಹೋಗಿ 64 ಸಾವಿರ ರೂ. ಕಳೆದುಕೊಂಡ ಮಹಿಳೆ! - OLX case news

ಓಎಲ್ಎಕ್ಸ್​ ಮೂಲಕ ಮಹಿಳೆಯೊಬ್ಬಳು ಹಣ ಕಳೆದುಕೊಂಡಿದ್ದಾಳೆ. ಜಾಹೀರಾತು ನೋಡಿದ ವ್ಯಕ್ತಿ ಆಕೆಯ ವಾಟ್ಸಪ್ ನಂಬರ್ ಪಡೆದುಕೊಂಡು ಕ್ಯೂ ಆರ್ ಕೋಡ್ ಮೂಲಕ ಹಣ ಲಪಟಾಯಿಸಿದ್ದಾನೆ.

Woman loses 64 thousand rupees in cyber fraud
ಸಂಗ್ರಹ ಚಿತ್ರ

By

Published : Dec 24, 2020, 3:34 AM IST

ಮಂಗಳೂರು:ಓಎಲ್ಎಕ್ಸ್​ನಲ್ಲಿ ಗ್ರೈಂಡರ್ ಮಾರಾಟ ಮಾಡಲು ಹೋಗಿ ಮಹಿಳೆಯೊಬ್ಬರು ರೂ. 64650 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಮಹಿಳೆಯೊಬ್ಬರು ಹಳೆ ಗ್ರೈಂಡರ್ ಮಾರಾಟ ಮಾಡಲು ಇಚ್ಚಿಸಿ ಓಎಲ್ಎಕ್ಸ್​ನಲ್ಲಿ ಜಾಹೀರಾತು ಹಾಕಿದ್ದರು. ಇದನ್ನು ನೋಡಿ ಓರ್ವ ವ್ಯಕ್ತಿ ಖರೀದಿಸುವುದಾಗಿ ಓಎಲ್ಎಕ್ಸ್​ನಲ್ಲಿ ಚಾಟ್ ಮಾಡಿ ಮಹಿಳೆಯ ವಾಟ್ಸಪ್ ನಂಬರ್ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ : OLXನಲ್ಲಿ ಮೋಸ ಹೋಗಿ ತಾನೂ ವಂಚನೆಗೆ ಯತ್ನಿಸಿದ ಆರೋಪಿ ಅರೆಸ್ಟ್‌

ಹಣ ಕಳುಹಿಸಿಕೊಡುವುದಾಗಿ ತಿಳಿಸಿ ಕ್ಯೂ ಆರ್ ಕೋಡ್ ವಾಟ್ಸಪ್​​ಗೆ ಕಳುಹಿಸಿಕೊಟ್ಟಿದ್ದಾನೆ. ಅದನ್ನು ಸ್ಕ್ಯಾನ್ ಮಾಡಲು ಹೇಳಿದಂತೆ ಮಹಿಳೆ ಮಾಡಿದಾಗ ಮಹಿಳೆಯ ಎರಡು ಬ್ಯಾಂಕ್ ಖಾತೆಯಿಂದ 64650. ರೂ ಲಪಟಾಯಿಸಿದ್ದಾನೆ. ಈ ಬಗ್ಗೆ ಮಹಿಳೆಯ ಪುತ್ರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ABOUT THE AUTHOR

...view details