ಕಡಬ(ದಕ್ಷಿಣ ಕನ್ನಡ) :ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಚಮಮುಖಿ ದೇವಸ್ಥಾನದ ಬಳಿ ಕೆಎಸ್‌ಆರ್‌ಟಿಸಿ ಬಸ್‌ನಿಂದ ಬಿದ್ದು ಬೆಂಗಳೂರು ಮೂಲದ ಮಹಿಳೆ ಮೃತಪಟ್ಟ ಘಟನೆ ನವೆಂಬರ್ 21 ರಂದು ನಡೆದಿದೆ. ಈ ಘಟನೆ ಸಂಬಂಧ ಬಸ್‌ನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣದಿಂದ ಧರ್ಮಸ್ಥಳಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಬೆಂಗಳೂರು ದಾಸರಹಳ್ಳಿ ಮೂಲದ ರತ್ನಮ್ಮ (58) ಎಂಬ ಮಹಿಳೆ ತಿರುವಿನಲ್ಲಿ ಬಸ್‌ನಿಂದ ಹೊರ ಬಿದ್ದಿದ್ದಾರೆ. ಈ ವೇಳೆ, ರತ್ನಮ್ಮ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲೇ ಉಪಚರಿಸಿ ಅವರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ರತ್ನಮ್ಮ ಸಾವನ್ನಪ್ಪಿದ್ದರು.