ಕರ್ನಾಟಕ

karnataka

ETV Bharat / state

ಮಕ್ಕಳು, ಅಜ್ಜಿಗೆ ನಿದ್ರೆ ಮಾತ್ರೆ ನೀಡಿ ನೇಣಿಗೆ ಶರಣಾದ ಮಹಿಳೆ - ಮಂಗಳೂರು ಮಹಿಳೆ ಆತ್ಮಹತ್ಯೆ ಪ್ರಕರಣ

ಮಕ್ಕಳು ಮತ್ತು ಅಜ್ಜಿಗೆ ನಿದ್ರೆ ಮಾತ್ರೆ ನೀಡಿ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

woman-commits-suicide-in-mangaluru
ಮಹಿಳೆ ನೇಣಿಗೆ ಶರಣು

By

Published : Oct 11, 2020, 2:37 AM IST

ಮಂಗಳೂರು:ಮಕ್ಕಳು ಮತ್ತು ಅಜ್ಜಿಗೆ ನಿದ್ರೆ ಮಾತ್ರೆ ನೀಡಿ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ನಗರದ ಶಕ್ತಿನಗರದ ಸಮೀಪ ಪ್ರೀತಿನಗರದಲ್ಲಿ ನಡೆದಿದೆ. ಘಟನೆಯಲ್ಲಿ 10 ತಿಂಗಳ ಮಗು ಹಾಗೂ ಮಹಿಳೆ ಮೃತಪಟ್ಟಿದ್ದಾರೆ‌.

ಪ್ರಮೀಳಾ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಚಹಾದಲ್ಲಿ ಅಜ್ಜಿ ಮತ್ತು ಇಬ್ಬರು ಮಕ್ಕಳಿಗೆ ನಿದ್ರೆ ಮಾತ್ರೆ ಕೊಟ್ಟು ಪ್ರಮೀಳಾ ನೇಣಿಗೆ ಶರಣಾಗಿದ್ದಾರೆ. ಸಂಜೆ ನಿದ್ರೆಯಿಂದ ಎಚ್ಚೆತ್ತ ಅಜ್ಜಿಯಿಂದ ಘಟನೆ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ದೊಡ್ಡ ಮಗು ಸಾವಿನ ದವಡೆಯಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆದರೆ 10 ತಿಂಗಳ ಮಗು ಐಶಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಮನೆಯಲ್ಲಿ ಡೆತ್​​ನೋಟ್ ಪತ್ತೆಯಾಗಿದ್ದು, ಗಂಡನ ಜೊತೆ ಮನಸ್ತಾಪದಿಂದ ಪ್ರಮೀಳಾ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ‌. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details