ಸುಳ್ಯ(ದಕ್ಷಿಣ ಕನ್ನಡ): ಮಗುವಿನೊಂದಿಗೆ ತಾಯಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಗು ಬದುಕುಳಿದಿರುವ ಘಟನೆ ಸುಬ್ರಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ತಳೂರು ದಯಾನಂದ ಎಂಬವರ ಪತ್ನಿ ಗೀತಾ ಎಂದು ಗುರುತಿಸಲಾಗಿದೆ. ಇವರು ಎನ್.ಎಮ್.ಸಿನಲ್ಲಿ ಕಛೇರಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಸುಳ್ಯ: ಮಗುವಿನೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ, ಬದುಕುಳಿದ ಮಗು - women suicide in sulya talur village
ತಾಯಿಯೋರ್ವಳು ತನ್ನ ಮಗವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಗು ಬದುಕುಳಿದಿದೆ.
ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ : ಬದುಕುಳಿದ ಮಗು..!
ಮಗು ಕೆರೆಯೊಳಗಿದ್ದ ಒಂದು ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸ್ಥಳೀಯರ ಸಹಾಯದಿಂದ ರಕ್ಷಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.