ಮಂಗಳೂರು:ಟೋಲ್ ಗೇಟ್ ವಿರುದ್ದ ಹೋರಾಟ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅವಾಚ್ಯವಾಗಿ ನಿಂದಿಸಿದ ಕಹಳೆ ವೆಬ್‌ಸೈಟ್ ಸಂಪಾದಕ ಶ್ಯಾಮ ಸುದರ್ಶನ ಭಟ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ನೀಡಿರುವ ದೂರಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಶ್ಯಾಮ ಸುದರ್ಶನ ಭಟ್ ಈಗಾಗಲೇ ವಿಡಿಯೋ ಮಾಡಿ ಮಾತನಾಡಿದ್ದಾನೆ. ಆತ ಅದರಲ್ಲಿ ಸರ್ಕಾರ ಮತ್ತು ಪೊಲೀಸರ ಮೇಲೆ ಭರವಸೆ ಇದೆ ಎಂದು ಹೇಳಿದ್ದಾನೆ. ಅದರಂತೆ ಇದೆ ಎಂದು ಕಾಣುತ್ತದೆ. ಎಫ್ಐಆರ್ ಆಗಿ ಎರಡು ದಿನ ಆದರೂ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಕಮಿಷನರ್ ಅವರಿಗೆ ಫೋನ್ ಮಾಡಿದರೂ ಸ್ಪಂದನೆ ಇಲ್ಲ ಎಂದು ದೂರಿದರು.
ದೀಪಾವಳಿ ದಿನ ಶ್ಯಾಮ ಸುದರ್ಶನ ಭಟ್ ಮನೆಯಲ್ಲಿ ಇಲ್ಲ. ಹೆಂಡತಿ ತಾಯಿ ಜೊತೆಗೆ ಪರಾರಿಯಾಗಿದ್ದಾನೆ. ಪೊಲೀಸರೇ ತಪ್ಪಿಸಿದ್ದಾರಾ? ಎಂದು ಗೊತ್ತಿಲ್ಲ. ಇದೀಗ ಮಾನ ನಷ್ಟ ಮೊಕದ್ದಮೆ ಹೂಡಲು ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಲು ಸಿದ್ದತೆ ಮಾಡಿಕೊಂಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಬರೆಯುವವರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.