ಮಂಗಳೂರು :ಮೂಡುಬಿದಿರೆ ತಾಲೂಕಿನಲ್ಲಿ ಒಂದೇ ಮನೆಯ ಐವರು ಸದಸ್ಯರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಗರದ ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36) ಹಾಗೂ ಅವರ ಮಕ್ಕಳಾದ ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ತಾಯಿ ಮನೋರಂಜಿತಂ (56) ಎಂಬುವರು ನಾಪತ್ತೆಯಾದವರು.
ಸುವರ್ಣನಗರ ನಿವಾಸಿ ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ ಎಂಬುವರು ಮಾ.10ರಂದು ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, ಎಪ್ಸಿಬಾ ಹಾಗೂ ಅತ್ತೆ ಮನೋರಂಜಿತಂ ಜತೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಜಯರಾಜ್ ಶೇಖರ್ ದೂರು ನೀಡಿದ್ದು, ಮನೆಯಲ್ಲಿದ್ದ ಬಂಗಾರದ ಆಭರಣ ಮತ್ತು 1.40 ಲಕ್ಷ ರೂ. ನಗದನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.