ಸುಳ್ಯ(ದ.ಕ): ಶಾಸಕ ಎಸ್.ಅಂಗಾರ ಅವರಿಗೆ ಕೊರೊನಾ ಬಾಧಿಸಿದ ಬೆನ್ನಲ್ಲೇ ಶಾಸಕರ ಪತ್ನಿಗೂ ಕೊರೊನಾ ದೃಢವಾಗಿದೆ.
ಸುಳ್ಯ ಶಾಸಕ ಅಂಗಾರ ಪತ್ನಿಗೂ ಕೊರೊನಾ ಸೋಂಕು - Sulya MLA S Angara
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರಿಗೆ ನಿನ್ನೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ನಡುವೆ ಅವರ ಪತ್ನಿಗೂ ಸಹ ಕೊರೊನಾ ಪಾಸಿಟಿವ್ ವರದಿ ಬಂದಿದೆ.
![ಸುಳ್ಯ ಶಾಸಕ ಅಂಗಾರ ಪತ್ನಿಗೂ ಕೊರೊನಾ ಸೋಂಕು mla-angaras-wife-tests-positive-after-his-home-quarantine](https://etvbharatimages.akamaized.net/etvbharat/prod-images/768-512-8604544-thumbnail-3x2-mng.jpg)
ಸುಳ್ಯ: ಶಾಸಕ ಅಂಗಾರ ಪತ್ನಿಗೂ ದೃಢಪಟ್ಟ ಕೊರೊನಾ
ಸದ್ಯ ಅವರಿಬ್ಬರೂ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇಂದು ಇಬ್ಬರ ಮನೆಯವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅಂಗಾರ ಅವರ ಪತ್ನಿ ಮತ್ತು ಅವರ ಮನೆಯಲ್ಲಿರುವ ಇಬ್ಬರು ಸದಸ್ಯರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಆದರೆ ಶಾಸಕರ ಚಾಲಕನ ಮನೆಯವರಿಗೆ ನೆಗೆಟಿವ್ ವರದಿ ಬಂದಿದೆ.