ಕರ್ನಾಟಕ

karnataka

ETV Bharat / state

ಮದ್ಯ ಸೇವಿಸಿ ಜಗಳ: ಕತ್ತಿಯಿಂದ ಹಲ್ಲೆ ಮಾಡಿ ಗಂಡನನ್ನೇ ಕೊಲೆಗೈದಳು! - ಪತ್ನಿಯಿಂದಲೇ ಗಂಡನ ಕೊಲೆ

ಹೆಂಡತಿಯೇ ಸ್ವತಃ ಗಂಡನನ್ನು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದಿದೆ.

Umavati
ಉಮಾವತಿ

By

Published : Mar 6, 2021, 3:30 PM IST

ಬಂಟ್ವಾಳ: ಮದ್ಯ ಸೇವಿಸಿ ಗಂಡ ಹೆಂಡತಿಯ ನಡುವೆ ನಡೆಯುತ್ತಿದ್ದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನಡೆದಿದೆ.

ಶೇಷಪ್ಪ ಪೂಜಾರಿ ಪತ್ನಿಯಿಂದ ಕೊಲೆಯಾದ ವ್ಯಕ್ತಿ. ಬಂಟ್ವಾಳ ತಾಲೂಕು ನಾವೂರು ಗ್ರಾಮದ ಸೂರ ಕ್ವಾರ್ಟರ್ಸ್ ನಿವಾಸಿಗಳಾದ ಶೇಷಪ್ಪ ಪೂಜಾರಿ ಮತ್ತು ಹೆಂಡತಿ ಉಮಾವತಿ ಇಬ್ಬರೂ ಮದ್ಯ ಸೇವಿಸಿ ಮನೆಯಲ್ಲಿ ಜಗಳವಾಡಿ ಕೊಳ್ಳುತ್ತಿದ್ದರು.

ಮಾ.3ರಂದು ರಾತ್ರಿ ಗಂಡ ಹೆಂಡತಿ ಮಧ್ಯೆ ಜಗಳ ಆರಂಭವಾದಾಗ, ಹೆಂಡತಿ ಉಮಾವತಿ ಮನೆಯಲ್ಲಿಯೇ ಇದ್ದ ಕತ್ತಿಯಿಂದ ಗಂಡನಿಗೆ ಹೊಡೆದಿದ್ದು ಅದರಿಂದ ಶೇಷಪ್ಪ ಅವರ ಬಲ ಹಣೆಯಲ್ಲಿ ಗಾಯವಾಗಿದೆ. ಈ ವೇಳೆ ಮಗಳು ನಯನ ಜಗಳ ಬಿಡಿಸಿದ್ದಾರೆ.

ಗಾಯ ಸಣ್ಣಪುಟ್ಟದ್ದೆಂದು ಚಿಕಿತ್ಸೆ ಪಡೆಯದ್ದರಿಂದ ರಕ್ತಸ್ರಾವದಿಂದ ಶುಕ್ರವಾರ ಸಂಜೆ ಶೇಷಪ್ಪ ಮೃತಪಟ್ಟಿದ್ಧಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details