ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಒಟ್ಟು 60 ಸ್ಥಾನಗಳಲ್ಲಿ 44 ಸ್ಥಾನ ಪಡೆಯುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಚುನಾವಣಾ ಫಲಿತಾಂಶ ಕುತೂಹಲದ ಬಳಿಕ ಪಾಲಿಕೆಗೆ ಬಿಜೆಪಿಯಿಂದ ಮೊದಲ ಮೇಯರ್ ಯಾರಾಗಲಿದ್ದಾರೆ ಎಂಬುದೀಗ ಕುತೂಹಲ ಕೆರಳಿಸಿದೆ.
ಈಗಾಗಲೇ ನಿಗದಿಯಾಗಿರುವ ಮೀಸಲಾತಿಯಂತೆ ಹಿಂದುಳಿದ A ಪ್ರವರ್ಗದವರು ಮೇಯರ್ ಹುದ್ದೆ ಅಲಂಕರಿಸಲಿದ್ದಾರೆ. ಅದರಂತೆ ಬಿಜೆಪಿಯಿಂದ ಆಯ್ಕೆಯಾಗಿರುವ 44 ಮಂದಿ ಕಾರ್ಪೋರೇಟರ್ಗಳಲ್ಲಿ 10 ಮಂದಿ ಹಿಂದುಳಿದ ವರ್ಗ A ಗೆ ಸೇರಿದವರು. ಇದರಲ್ಲಿ ಯಾರೂ ಹಿರಿಯರಿಲ್ಲ ಎನ್ನುವುದೇ ವಿಶೇಷ.