ಕರ್ನಾಟಕ

karnataka

ETV Bharat / state

ಅಂದು ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ?: ಈಶ್ವರಪ್ಪ ರಾಜೀನಾಮೆ ಆಗ್ರಹಕ್ಕೆ ಸಿಎಂ ಮರು ಪ್ರಶ್ನೆ - ಸಂತೋಷ್​ ಪಾಟೀಲ್​ ಆತ್ಮಹತ್ಯೆ ಬಗ್ಗೆ ಉಡುಪಿಯಲ್ಲಿ ಸಿಎಂ ಪ್ರತಿಕ್ರಿಯೆ

ಸಂತೋಷ್ ಮಾಡಿರುವ ಆರೋಪವನ್ನು ಈಶ್ವರಪ್ಪ ಅಲ್ಲಗಳೆದಿದ್ದಾರೆ. ಸಂತೋಷ್ ಮೇಲೆ ಮತ್ತು ಮಾಧ್ಯಮದ ಮೇಲೆ ಕೋರ್ಟ್​ನಲ್ಲಿ ಕೇಸ್‌ ಹಾಕಿರುವ ಬಗ್ಗೆ ಈಶ್ವರಪ್ಪ ತಿಳಿಸಿದ್ದರು‌. ಆದರೆ, ಸಂತೋಷ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಆರೋಪ ಮಾಡಿದ್ದು, ಸರ್ಕಾರಕ್ಕೆ ತಿಳಿಸಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಸತ್ಯಾಂಶ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದರು..

CM's response in Udupi about Santosh Patil's suicide
ಈಶ್ವರಪ್ಪ ರಾಜೀನಾಮೆ ಆಗ್ರಹಕ್ಕೆ ಸಿಎಂ ಮರುಪ್ರಶ್ನೆ

By

Published : Apr 12, 2022, 3:20 PM IST

ಮಂಗಳೂರು :ತಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ಅವರು ರಾಜೀನಾಮೆ ‌ನೀಡಿದ್ರಾ?. ಈಶ್ವರಪ್ಪ ಮೇಲೆ ಶೇ. 40ರಷ್ಟು ಕಮಿಷನ್ ಆರೋಪ ಮಾಡಿ, ಸಂತೋಷ್​ ಪಾಟೀಲ್​ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಹಿನ್ನೆಲೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಈ ರೀತಿ ಉತ್ತರಿಸಿದ್ದಾರೆ.

ಸಚಿವ ಈಶ್ವರಪ್ಪ ರಾಜೀನಾಮೆ ಆಗ್ರಹಕ್ಕೆ ಸಿಎಂ ಮರು ಪ್ರಶ್ನೆ ಮಾಡಿರುವುದು..

ಈಶ್ವರಪ್ಪ ವಿರುದ್ಧ ಆರೋಪ ಮಾಡಿರುವ ಸಂತೋಷ್ ಎಂಬುವರು ಉಡುಪಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಎಫ್​​ಎಸ್​ಎಲ್ ಅಧಿಕಾರಿಗಳಿಗೂ ಸ್ಥಳಕ್ಕೆ ತೆರಳಿ ಪರಿಶೀಲಿಸಲು ಸೂಚಿಸಿದ್ದೇನೆ. ತನಿಖೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಈ ಸಂಬಂಧ ತನಿಖಾ ವರದಿ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರ.. ಬೆಳಗಾವಿಯ ಸಂತೋಷ್​ ಪಾಟೀಲ್​ ಆತ್ಮಹತ್ಯೆ

ಸಂತೋಷ್ ಮಾಡಿರುವ ಆರೋಪವನ್ನು ಈಶ್ವರಪ್ಪ ಅಲ್ಲಗಳೆದಿದ್ದಾರೆ. ಸಂತೋಷ್ ಮೇಲೆ ಮತ್ತು ಮಾಧ್ಯಮದ ಮೇಲೆ ಕೋರ್ಟ್​ನಲ್ಲಿ ಕೇಸ್‌ ಹಾಕಿರುವ ಬಗ್ಗೆ ಈಶ್ವರಪ್ಪ ತಿಳಿಸಿದ್ದರು‌. ಆದರೆ, ಸಂತೋಷ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಆರೋಪ ಮಾಡಿದ್ದು, ಸರ್ಕಾರಕ್ಕೆ ತಿಳಿಸಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಸತ್ಯಾಂಶ ಬಂದ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದರು.

For All Latest Updates

TAGGED:

ABOUT THE AUTHOR

...view details