ಕರ್ನಾಟಕ

karnataka

ETV Bharat / state

ರಾಜಕೀಯ ಗಣ್ಯರನ್ನು ಹತ್ಯೆ ಮಾಡುವ ಬಗ್ಗೆ ವಾಟ್ಸಪ್​​​ನಲ್ಲಿ ಬೆದರಿಕೆ ಆರೋಪ: ಓರ್ವ ಪೊಲೀಸ್​​ ವಶಕ್ಕೆ - ಎನ್ ಆರ್ ಸಿ ಮತ್ತು ಸಿ ಎ ಎ ಕಾಯ್ದೆ ಬಗ್ಗೆ ವಾಟ್ಸಪ್ ನಲ್ಲಿ ವಿರೋಧಿಸಿದ ಆರೋಪಿ ಬಂಧಿಸಿದ ವಿಟ್ಲ ಪೊಲೀಸರು

ಎನ್​​ಆರ್​​ಸಿ ಮತ್ತು ಸಿಎಎ ಕಾಯ್ದೆ ಬಗ್ಗೆ ವಾಟ್ಸಪ್​​ನಲ್ಲಿ ವಿರೋಧಿಸಿ ರಾಜಕೀಯ ಗಣ್ಯರನ್ನು ಕೊಲೆ ಮಾಡುವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಓರ್ವನನ್ನು ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

whatsapp-threats-about-assassination-of-political-elite-whitla-police-arrest-the-accused-in-mangalore
ರಾಜಕೀಯ ಗಣ್ಯರನ್ನು ಹತ್ಯೆ ಮಾಡುವ ಬಗ್ಗೆ ವಾಟ್ಸಪ್ ನಲ್ಲಿ ಬೆದರಿಕೆ

By

Published : Jan 7, 2020, 1:56 PM IST

ಮಂಗಳೂರು:ಎನ್​​ಆರ್​​ಸಿ ಮತ್ತು ಸಿಎಎ ಕಾಯ್ದೆ ಬಗ್ಗೆ ವಾಟ್ಸಪ್​​ನಲ್ಲಿ ವಿರೋಧಿಸಿ ರಾಜಕೀಯ ಗಣ್ಯರನ್ನು ಕೊಲೆ ಮಾಡುವ ಬೆದರಿಕೆಯೊಡ್ಡಿದ ಆರೋಪದ ಮೇಲೆ ಓರ್ವನನ್ನು ವಿಟ್ಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಅನ್ವರ್ ಎಂಬಾತನೇ ಪೊಲೀಸರು ವಶಕ್ಕೆ ತೆಗೆದುಕೊಂಡ ಆರೋಪಿ. ಅನ್ವರ್ ಮತ್ತು ನಿಯಾಜ್ ಎಂಬುವರು ವಾಮಂಜೂರಿನ ಹಿಂದೂ ಸಂಘಟನೆಗಳಿಗೆ ಸೇರಿದ ಕೆಲವರಿಗೆ ಮತ್ತು ವಿದೇಶದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬರಿಗೆ ಎನ್​​ಆರ್​​ಸಿ ಮತ್ತು ಸಿಎಎ ಕಾಯ್ದೆ ವಿರೋಧಿಸಿ ಒತ್ತಡ ಹಾಕಿ ಹಿಂದೂ ಸಂಘಟನೆಯ ಸದಸ್ಯರನ್ನು ಮತ್ತು ರಾಜಕೀಯ ಗಣ್ಯರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಯತೀಶ್ ಎಂಬುವರು ದೂರು ನೀಡಿದ್ದಾರೆ.

ಯತೀಶ್ ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸರು ಅನ್ವರ್​​ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details