ಮಂಗಳೂರು:ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಮಾಜಿ ಶಾಸಕ ಮೊಯ್ದೀನ್ ಭಾವ ಅವರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ಲಿಖಿತ ದೂರು ಬಂದ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವುದೆಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ತಿಳಿಸಿದರು.
ಮೊಯ್ದೀನ್ ಭಾವ ಮೇಲೆ ಹಲ್ಲೆ ಪ್ರಕರಣ: ದೂರು ನೀಡಿದ್ರೆ ಕ್ರಮಕ್ಕೆ ಸಿದ್ದ ಎಂದ ಜಿಲ್ಲಾಧ್ಯಕ್ಷ - ಮಾಜಿ ಶಾಸಕ ಮೊಯ್ದೀನ್ ಭಾವ ಹಲ್ಲೆ ಪ್ರಕರಣ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಮಾಜಿ ಶಾಸಕ ಮೊಯ್ದೀನ್ ಭಾವ ಅವರ ಮೇಲೆ ಹಲ್ಲೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣಕ್ಕೆ ಸಂಬಂಧಸಿದಂತೆ ಲಿಖಿತ ದೂರು ಬಂದ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವುದೆಂದು ತಿಳಿಸಿದ್ದಾರೆ.
![ಮೊಯ್ದೀನ್ ಭಾವ ಮೇಲೆ ಹಲ್ಲೆ ಪ್ರಕರಣ: ದೂರು ನೀಡಿದ್ರೆ ಕ್ರಮಕ್ಕೆ ಸಿದ್ದ ಎಂದ ಜಿಲ್ಲಾಧ್ಯಕ್ಷ](https://etvbharatimages.akamaized.net/etvbharat/prod-images/768-512-4956864-thumbnail-3x2-uda.jpg)
District President Harish Kumar
ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ನಡೆಯಬಾರದಿತ್ತು. ಯಾರ ಮೇಲೂ ಕೈ ಮಾಡಲು ಯಾರಿಗೂ ಅಧಿಕಾರವಿಲ್ಲ. ಮೊಯ್ದೀನ್ ಭಾವ ಅವರು ಹಲ್ಲೆ ಘಟನೆ ನಡೆದ ಬಳಿಕ ಅವರು ಮಾತನಾಡಲು ಸಿಕ್ಕಿಲ್ಲ. ಇಂದು ನಡೆಯುವ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅವರು ಲಿಖಿತ ದೂರು ನೀಡಲಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದರು.
ವಾರ್ಡ್ ನಂ 60ರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎದುರು ಪಕ್ಷದ ಕಾರ್ಯಕರ್ತರು ಚುನಾವಣೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂದೆಗೆಯದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.