ಕರ್ನಾಟಕ

karnataka

ETV Bharat / state

ಸಂಕಷ್ಟಕ್ಕೊಳಗಾದವರಿಗೆ ಬದುಕು ಕಟ್ಟಿಕೊಳ್ಳಲು ತಳ್ಳುಗಾಡಿ ವಿತರಿಸಿದ್ದೇವೆ: ವಿವೇಕ್ ರಾಜ್ ಪೂಜಾರಿ - go-cart Delivery to the Beneficiaries from congress party at mangalore

ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಘಟಕದಿಂದ ಇಬ್ಬರು ವಿಕಲಚೇತನರು ಸೇರಿ ಹತ್ತು ಮಂದಿ ಫಲಾನುಭವಿಗಳಿಗೆ ತಳ್ಳುಗಾಡಿ ವಿತರಿಸಲಾಯಿತು.

go-cart
ತಳ್ಳುಗಾಡಿ ವಿತರಣೆ

By

Published : Nov 27, 2020, 4:24 PM IST

ಮಂಗಳೂರು:ಕೋವಿಡ್​ನಿಂದ ಸಂಕಷ್ಟಕ್ಕೊಳಗಾಗಿರುವವರು ಸ್ವಸಾಮರ್ಥ್ಯದ ಮೇಲೆ ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಜಾತಿ, ಮತ ಭೇದ ನೋಡದೆ ನಾವು ಈ ತಳ್ಳುಗಾಡಿ ವಿತರಣೆ ಮಾಡಿದ್ದೇವೆ ಎಂದು ಕಾಂಗ್ರೆಸ್ ಸದಸ್ಯ ವಿವೇಕ್ ರಾಜ್ ಪೂಜಾರಿ ಹೇಳಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಘಟಕದಿಂದ ಇಬ್ಬರು ವಿಕಲಚೇತನರು ಸೇರಿ ಹತ್ತು ಮಂದಿ ಫಲಾನುಭವಿಗಳಿಗೆ ತಳ್ಳುಗಾಡಿ ವಿತರಿಸಲಾಯಿತು.

ವಿವೇಕ್ ರಾಜ್ ಪೂಜಾರಿ

ಕಾಂಗ್ರೆಸ್ ಸದಸ್ಯ, ಪನಮಾ ಕಾರ್ಪೊರೇಷನ್ ಲಿ. ಸಿಇಒ ವಿವೇಕ್ ರಾಜ್ ಪೂಜಾರಿ ಉಚಿತವಾಗಿ ನೀಡಿರುವ ಈ ತಳ್ಳುಗಾಡಿಯನ್ನು ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಘಟಕದ ವತಿಯಿಂದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಉಪಸ್ಥಿತಿಯಲ್ಲಿ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗ ವಿತರಣೆ ಮಾಡಲಾಯಿತು. ಫಲಾನುಭವಿಗಳಲ್ಲಿ ಐವರು ಮಹಿಳೆಯರು, ಇಬ್ಬರು ವಿಕಲ ಚೇತನರಿದ್ದರು.

ಇದನ್ನೂ ಓದಿ:‘ಎರಡು ರಾಜ್ಯದ ಸಿಎಂಗಳು ನಿಮ್ಮ ಬೆನ್ನಿಗಿದ್ದಾರೋ, ಕಾಲು ಕೆಳಗಿದ್ದಾರೋ ಗೊತ್ತಿಲ್ಲ'

ಬಡ ಬೀದಿಬದಿ ವ್ಯಾಪರಸ್ಥರಿಗೆ ಹಣ್ಣು ಹಾಗೂ ತರಕಾರಿ ಮಾರಲು ಈ ತಳ್ಳುಗಾಡಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿದ್ದು, ಮಾರಾಟಕ್ಕೆ ಬೇಕಾಗುವ ವಸ್ತುಗಳಿಗೂ ಕೇಂದ್ರ ಸರ್ಕಾರದ 'ಆತ್ಮ ನಿರ್ಭರ' ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆಯಡಿ 10 ಸಾವಿರ ರೂ‌. ಸಾಲ ಒದಗಿಸಿ ಕೊಡಲಾಗುತ್ತದೆ ಎಂದು ಫಲಾನುಭವಿಗಳಿಗೆ ಕಾಂಗ್ರೆಸ್ ಭರವಸೆ ನೀಡಿದೆ.

For All Latest Updates

TAGGED:

ABOUT THE AUTHOR

...view details