ಕರ್ನಾಟಕ

karnataka

ETV Bharat / state

ಅಬ್ಬಕ್ಕ ಭವನದ ಬಳಿ ಬ್ಯಾರಿ ಭವನ ಬೇಡ; ಮಾಜಿ ಶಾಸಕ ಜಯರಾಮ ಶೆಟ್ಟಿ - Abbakka Bhavan of Upalaka

ಉಳ್ಳಾಲದ ಅಬ್ಬಕ್ಕ ಭವನದ ಬಳಿ ಬ್ಯಾರಿ ಭವನ ಬೇಡ. ಮುಂದೆ ಇದು ಅನೇಕ ಗಲಭೆಗಳಿಗೆ ಕಾರಣವಾಗಬಹುದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದ್ದಾರೆ.

Jayarama Shetty
ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿಕೆ

By

Published : Jan 1, 2021, 3:34 PM IST

Updated : Jan 1, 2021, 3:58 PM IST

ಉಳ್ಳಾಲ: ಅಬ್ಬಕ್ಕ ಭವನಕ್ಕೆ ತಾಗಿಕೊಂಡು ಬ್ಯಾರಿ ಭವನ ಖಂಡಿತಾ ಬೇಡ, ಉಳ್ಳಾಲವು ಅತಿಸೂಕ್ಷ್ಮ ಪ್ರದೇಶವಾಗಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದ್ದಾರೆ.

ಸಣ್ಣ ಹುಡುಗ ಕಲ್ಲು ಬಿಸಾಡಿದರೂ ಗಲಭೆ ನಡೆಯುವಂತಹ ಸ್ಥಳ ಇದು. ಇಂಥ ವಾತಾವರಣ ಇರುವ ಸಂದರ್ಭ ವಿಭಿನ್ನ ವ್ಯವಸ್ಥೆಗಳ ಭವನ ಒಟ್ಟೊಟ್ಟಿಗೆ ಆದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳಾಗಲಿವೆ ಎಂದು ಹೇಳಿದ್ದಾರೆ.

ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿಕೆ

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂಟ ಮಾತನಾಡಿ, ಅಬ್ಬಕ್ಕ ಭವನ ಸಾತ್ವಿಕ ಸ್ವರೂಪದ ರಾಷ್ಟ್ರಕ್ಕೆ ಸಂಬಂಧಿಸಿದ ಅಭಿಮಾನದ ಸಂಕೇತದ ವಿಚಾರ. ಇತರೆ ಜಿಲ್ಲೆಗಳಲ್ಲಿ ಇರುವಂತೆ ದ.ಕ ಜಿಲ್ಲೆಯಲ್ಲಿರುವ ಸಮುದಾಯ ಭವನಗಳು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಬ್ಯಾರಿ ಭವನ, ಕನ್ನಡ ಭವನದ ನಿರ್ಮಾಣ ಅಗತ್ಯ ಆಗಬೇಕು. ಆದರೆ ಒಟ್ಟೊಟ್ಟಿಗೆ ನಿರ್ಮಿಸುವುದರಲ್ಲಿ ಅರ್ಥವಿಲ್ಲ ಎಂದರು.

Last Updated : Jan 1, 2021, 3:58 PM IST

ABOUT THE AUTHOR

...view details