ಕರ್ನಾಟಕ

karnataka

By

Published : Oct 30, 2020, 5:08 PM IST

ETV Bharat / state

ನಾವ್​ ಲಂಚ ಪಡೆಯಲ್ಲ: ಸರ್ಕಾರಿ ಅಧಿಕಾರಿಗಳಿಂದ ಹೀಗೊಂದು ಪ್ರತಿಜ್ಞೆ

ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ಒಂದು ವಿಶಿಷ್ಟ ಪ್ರತಿಜ್ಞೆಯನ್ನು ಮಾಡಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಲೋಕಾಯುಕ್ತ ಪೊಲೀಸ್ ಡಿವೈಎಸ್​ಪಿ ವಿಜಯಪ್ರಸಾದ್ ಬೋಧಿಸಿದರು. ಅಧಿಕಾರಿಗಳು ತಾವು ಭ್ರಷ್ಟಾಚಾರಕ್ಕೆ ಆಸ್ಪದ ನೀಡಲ್ಲ ಮತ್ತು ಲಂಚ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾರೆ.

pledge
ಪ್ರತಿಜ್ಞೆ

ಸುಳ್ಯ/ಕಡಬ: ಲಂಚ ತೆಗೆದುಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ, ಅಧಿಕಾರಿಗಳು ಸಮಯ ಪಾಲನೆ ಮಾಡದಿರುವುದು, ಸರ್ಕಾರಿ ಕೆಲಸದ ಬಗ್ಗೆ ಅಗೌರವ, ಅಹಂಕಾರ, ದರ್ಪದಿಂದ ವರ್ತಿಸುವುದು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದಿರುವುದು ಕೂಡಾ ಭ್ರಷ್ಟಾಚಾರವೇ ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಡಿವೈಎಸ್​ಪಿ ವಿಜಯಪ್ರಸಾದ್ ಹೇಳಿದರು.

ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ"ಜಾಗೃತ ಭಾರತ-ಸಮೃದ್ಧ ಭಾರತ" ಶೀರ್ಷಿಕೆಯಡಿ ನಡೆದ ಜಾಗೃತಿ ಅರಿವು ಮತ್ತು ಪ್ರತಿಜ್ಞಾವಿಧಿ ಸಪ್ತಾಹದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಎಂದರೆ ಬರೇ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ, ಬದಲಾಗಿ ಕಚೇರಿಗೆ ಬರುವ ಅಧಿಕಾರಿಗಳು ಅವರ ಉಡುಗೆ-ತೊಡುಗೆ, ವರ್ತನೆ, ಕಚೇರಿ ವಿನ್ಯಾಸ, ಕಡತ ಜೋಡಣೆಯಲ್ಲೂ ತಮ್ಮದೇ ಆದ ಶಿಸ್ತನ್ನು ಪಾಲಿಸಬೇಕು ಎಂದರು.

ಸರ್ಕಾರಿ ಅಧಿಕಾರಿಗಳಿಂದ ಪ್ರತಿಜ್ಞೆ ಮಾಡಿಸಿದ ಡಿವೈಎಸ್​ಪಿ

ಕಚೇರಿಯಲ್ಲಿನ ಸಂಪ್ರದಾಯ ಮತ್ತು ಸಭ್ಯತೆಯನ್ನು ಆದಷ್ಟು ಪಾಲನೆ ಮಾಡಬೇಕು. ತಾವು ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಆ ಇಲಾಖೆಯ ಕುರಿತು ಪ್ರಥಮವಾಗಿ ಮಾಹಿತಿ ತಿಳಿದಿರಬೇಕು. ತಮಗೆ ತಮ್ಮ ಇಲಾಖೆಗಳ ಮಾಹಿತಿ ಇಲ್ಲ ಎಂದ ಮೇಲೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ಹುದ್ದೆ, ಕರ್ತವ್ಯದ ಕುರಿತು ಅರಿತುಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯ ಕೊನೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಲೋಕಾಯುಕ್ತ ಪೊಲೀಸ್ ಡಿವೈಎಸ್​ಪಿ ವಿಜಯಪ್ರಸಾದ್ ಬೋಧಿಸಿದರು. ಅಧಿಕಾರಿಗಳು ತಾವು ಭ್ರಷ್ಟಾಚಾರಕ್ಕೆ ಆಸ್ಪದ ನೀಡಲ್ಲ ಮತ್ತು ಲಂಚ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದರು.

ABOUT THE AUTHOR

...view details