ಕರ್ನಾಟಕ

karnataka

ETV Bharat / state

ಜೆಡಿಎಸ್​ ಅಭ್ಯರ್ಥಿ ಜೊತೆ ಪ್ರಚಾರ ಮಾಡಲ್ಲ, ಮೈತ್ರಿ ಧರ್ಮ ಪಾಲನೆಗೆ ಪ್ರತ್ಯೇಕವಾಗಿಯೇ ಪ್ರಚಾರ ಮಾಡ್ತೇವೆ: ಶಾಸಕ ಸತೀಸ್ ಸೈಲ್

ಮೈತ್ರಿ ಧರ್ಮ ಪಾಲನೆಗಾಗಿ ಮಾತ್ರ ಜೆಡಿಎಸ್​ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇವೆ ಹೊರೆತು ಅಭ್ಯರ್ಥಿ ಹೆಸರು ಹೇಳಿಯಲ್ಲ ಎಂದು ಎಂಎಲ್​ಎ ಸತೀಸ್​ ಬೈಲ್​ ತಿಳಿಸಿದ್ದಾರೆ.

By

Published : Apr 11, 2019, 4:41 AM IST

JDS-congress

ಕಾರವಾರ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ನಮ್ಮ ಕಾರ್ಯಕರ್ತರ ಕೆಲ ಬೇಡಿಕೆಗಳಿಗೆ ಒಪ್ಪಲು ಹಿಂದೇಟು ಹಾಕಿದ್ದು, ಈ ಕಾರಣದಿಂದ ಮೈತ್ರಿ ಧರ್ಮ ಪಾಲನೆಗೆ ಪ್ರತ್ಯೇಕವಾಗಿಯೇ ಪ್ರಚಾರ ನಡೆಸುವುದಾಗಿ ಶಾಸಕ ಸತೀಸ್ ಸೈಲ್ ಹೇಳಿದ್ದಾರೆ.

ಕಾರವಾರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡ ಲೋಕಸಭಾ ಮೈತ್ರಿ ಅಭ್ಯರ್ಥಿ ಪರ ಕಾರವಾರ ಮತ್ತು ಅಂಕೋಲಾದಲ್ಲಿ ಕಾಂಗ್ರೆಸ್ ಪ್ರತ್ಯೇಕವಾಗಿ ಪ್ರಚಾರ ನಡೆಸಲು ತಿರ್ಮಾನಿಸಲಾಗಿದೆ. ಎರಡು ಕಡೆಯೂ ತಲಾ ಐದು ದಿನಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೈತ್ರಿ ಅಭ್ಯರ್ಥಿ ತೆನೆ ಹೊತ್ತ ಮಹಿಳೆ ಚಿಹ್ನೆಗೆ ಮತ ನೀಡಿ ಎಂದು ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿನ ಮೈತ್ರಿ ಧರ್ಮ ಪಾಲನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಪೋನ್ ಮೂಲಕ ಮಾತನಾಡಿದ್ದರಿಂದ ಕಾರ್ಯಕರ್ತರ ಸಲಹೆ ಪಡೆದು ನಿರ್ಧಾರ ಕೈಗೊಂಡಿದ್ದೇನೆ. ಪ್ರಚಾರದ ವೇಳೆ ಮೈತ್ರಿ ಅಭ್ಯರ್ಥಿಗೆ ಮತ ನೀಡಿ ಎಂದು ಕೇಳುತ್ತೇವೆಯೇ ಹೊರತು ಆನಂದ್​ಗೆ ಮತ ನೀಡಿ ಎಂದು ಕೇಳುವುದಿಲ್ಲ. ಪ್ರಚಾರದ ವೇಳೆ ಮೈತ್ರಿ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ರಾಹುಲ್ ಗಾಂಧಿ ಪ್ರಧಾನಿ ಮಾಡುವ ಬೇಡಿಕೆ ಜನರ ಮುಂದೆ ಇಡಲಾಗುವುದು ಎಂದು ಹೇಳಿದರು.

ಶಾಸಕ ಸತೀಸ್ ಸೈಲ್

ಇನ್ನು ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ತಮ್ಮ ಗೆಲುವಿಗೆ ಬೆಂಬಲ ಕೋರಿ ಬಂದಾಗ ನಮ್ಮ ಕಾರ್ಯಕರ್ತರು ಅವರ ಮುಂದೆ ಕೆಲ ಬೇಡಿಕೆಗಳನ್ನು ಇಟ್ಟಿದ್ದರು. ಒಂದು ಲೋಕಸಭಾ ಅಭ್ಯರ್ಥಿಯಾಗಿರುವ ನಿಮಗೆ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮೊಂದಿಗೆ ಮತಯಾಚನೆಗೆ ಬರಬೇಕೆಂದರೆ ಮುಂದಿನ ದಿನಗಳಲ್ಲಿ ನೀವು ನಮ್ಮೊಂದಿಗೆ ಬರಬೇಕು ಹಾಗೂ ಲೋಕಸಭಾ ಅಭ್ಯರ್ಥಿಯಾಗಿರುವ ನೀವು ಮುಂದೆ ಇದರಲ್ಲಿಯೇ ಮುಂದುವರೆಯಬೇಕು. ಜತೆಗೆ ವಿಧಾನಸಭಾ ಚುನಾವಣೆ ವೇಳೆ ನಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದರು.

ಆದರೆ ಇದಕ್ಕೆ ಒಪ್ಪದ ಅವರು ಈ ಚುನಾವಣೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಬಂದರೆ ವಿಧಾನಸಭೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತ್ಯೇಕವಾಗಿಯೇ ಮತ ಯಾಚನೆ ಮಾಡಲು ತಿಳಿಸಿದ್ದರಿಂದ ನಮ್ಮ ನಾಯಕರುಗಳ ಸೂಚನೆಯಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಮೈತ್ರಿ ಅಭ್ಯರ್ಥಿ ಪರ ನಮ್ಮ ನಾಯಕರಿಗೆ ಮತ ಯಾಚಿಸುವ ಬಗ್ಗೆ ಸಮಸ್ಯೆ ಇಲ್ಲ. ಆದರೆ ನಾವು ಒಂದೆ ಕಡೆ ಇರುವುದರಿಂದ ಈ ಸ್ಥಿತಿ ಬಂದಿದೆ. ಇದೀಗ ಒಂದು ಮನೆಯಲ್ಲಿ ಅಣ್ಣ ತಮ್ಮಂದಿರು ಹೇಗೆ ಸಹಾಯ ನೀಡುತ್ತಾರೋ ಅದೆ ರೀತಿ ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದರು.

ABOUT THE AUTHOR

...view details