ಕರ್ನಾಟಕ

karnataka

ETV Bharat / state

ಗೋಲಿಬಾರ್​ ತನಿಖೆ ನಂತರ ಪರಿಹಾರದ ಕುರಿತು ಕ್ರಮ.. ಗೃಹ ಸಚಿವ ಬೊಮ್ಮಾಯಿ - ಮಂಗಳೂರು ಗೋಲಿಬಾರ್ ತನಿಖೆ

ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರ ತನಿಖೆ ಮುಗಿದ ನಂತರ ಕಾನೂನು ರೀತಿ ನಿರ್ಣಯಗಳನ್ನು ಪಾಲಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

home minister basavaraj b
ಗೃಹ ಸಚಿವ ಬಸವರಾಜ ಬೊಮ್ಮಯಿ

By

Published : Dec 31, 2019, 7:14 PM IST

ಮಂಗಳೂರು:ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರಿಗೆ ತನಿಖೆ ನಂತರ ನಿರ್ಣಯಗಳ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ನೇತೃತ್ವವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಹಿಸಿದ್ದರು. ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಧರ್ಮಗಳ ಮುಖಂಡರು ಮತ್ತು ಅಧಿಕಾರಿಗಳು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಗೃಹ ಸಚಿವ ಬಸವರಾಜ ಬೊಮ್ಮಯಿ..

ಡಿಸೆಂಬರ್ 19ರ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜ.4ರಂದು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ಕೇಳಿದ್ದಾರೆ. ಜ.12 ರಂದು ಹಿಂದೂ ಪರ ಸಂಘಟನೆಗಳು ಜಾಗೃತಿ ಕಾರ್ಯಕ್ರಮ ಮಾಡಲು ಅವಕಾಶ ಕೇಳಿವೆ. ಎರಡು ಸಂಘಟನೆಗಳಿಗೆ ಕಾರ್ಯಕ್ರಮ ಮುಂದೂಡುವಂತೆ ವಿನಂತಿಸಲಾಗಿದೆ ಎಂದರು.

ಸಭೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಪಿ ಎಸ್ ಹರ್ಷ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಮುಸ್ಲಿಂ ಸಮುದಾಯದ ಮುಖಂಡ ಕೆ ಎಂ ಮಸೂದ್, ಹಿಂದು ಸಂಘಟನೆಗಳ ಮುಖಂಡ ಜಗದೀಶ್ ಶೇಣವ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ಯು ಟಿ ಖಾದರ್ ಹಾಗೂ ಶಾಸಕರುಗಳು ಉಪಸ್ಥಿತರಿದ್ದರು.

ABOUT THE AUTHOR

...view details