ಕರ್ನಾಟಕ

karnataka

ETV Bharat / state

ಚಿತ್ರರಂಗಕ್ಕೆ ಅಂಟಿದ ಡ್ರಗ್ಸ್​ ವಾಸನೆಯ ಮೂಲ ಹುಡುಕುತ್ತಿದ್ದೇವೆ: ಗೃಹ ಸಚಿವ ಬೊಮ್ಮಾಯಿ

ಎನ್​ಸಿಬಿಯವರು ಕೆಲವು ಸಿಂಥಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಎನ್ನುವ ಮಾಹಿತಿ ಇದೆ. ನಿನ್ನೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರನ್ನು ಕರೆದು ವಿಚಾರಣೆ ಮಾಡಲಾಗುತ್ತದೆ. ಅವರು ಏನು ಮಾಹಿತಿ ಕೊಡುತ್ತಾರೆ ಎಂಬುದನ್ನು ನೋಡೋಣವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Home minister Bommai
ಗೃಹ ಸಚಿವ ಬಸವರಾಜ ಬೊಮ್ಮಾಯಿ

By

Published : Aug 30, 2020, 12:26 PM IST

Updated : Aug 30, 2020, 12:38 PM IST

ಹುಬ್ಬಳ್ಳಿ:ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗ ಮಾತ್ರವಲ್ಲದೇ ಬಹಳಷ್ಟು ಜನ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲವನ್ನು ಹುಡುಕುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಇಲ್ಲಿಯವರೆಗೆ ಕೇವಲ ಗಾಂಜಾ ವ್ಯವಹಾರ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಲಾಗುತ್ತಿತ್ತು. ಸದ್ಯ ಡಾರ್ಕ್ ನೆಟ್ ಎನ್ನುವ ಆನ್​ಲೈನ್ ವೆಬ್​ಸೈಟ್​ಅನ್ನು ನಾವು ಬೇಧಿಸಿದ್ದೇವೆ. ಅಂಚೆ ಮೂಲಕವೂ ಡ್ರಗ್ಸ್​ ಪೂರೈಕೆ ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದರ ಅಂತಾರಾಜ್ಯ ಹಾಗೂ ವಿದೇಶ ಮೂಲವನ್ನ ಬೇಧಿಸುತ್ತಿದ್ದೇವೆ ಎಂದು ತಿಳಿಸಿದರು.

ಎನ್​ಸಿಬಿಯವರು ಕೆಲವು ಸಿಂಥಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಅದರಲ್ಲಿ ಕೆಲವು ಚಿತ್ರರಂಗದವರಿದ್ದಾರೆ ಎನ್ನುವ ಮಾಹಿತಿ ಇದೆ. ನಿನ್ನೆ ಇಂದ್ರಜಿತ್‌ ಲಂಕೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರನ್ನು ಕರೆದು ವಿಚಾರಣೆ ಮಾಡಲಾಗುತ್ತದೆ. ಅವರು ಏನು ಮಾಹಿತಿ ಕೊಡುತ್ತಾರೆ ಎಂಬುದನ್ನು ನೋಡೋಣ ಎಂದರು.

ಗೃಹ ಸಚಿವ ಬೊಮ್ಮಾಯಿ

ಈ ಪ್ರಕರಣ ಸಂಬಂಧ ನಮ್ಮ ಸಿಸಿಬಿಯವರಿಗೆ ಕೂಲಕುಂಶವಾಗಿ ತನಿಖೆ ಮಾಡಲು ಹೇಳಿದ್ದೇವೆ. ಚಿತ್ರರಂಗ ಇರಲಿ ಇನ್ಯಾವುದೇ ಇರಲಿ, ನಾವು ಬಿಡಲ್ಲ. ಕಾಲೇಜು ಆಡಳಿತ ಮಂಡಳಿಗಳಿಗೂ ಸೂಚನೆ ನೀಡುತ್ತೇವೆ. ಈ ವಿಚಾರವಾಗಿ ಪೊಲೀಸರ ಮೇಲೆ ರಾಜಕಾರಣಿಗಳ ಪ್ರಭಾವ ಇದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ನಿರ್ದೇಶಕ ಇಂದ್ರಜಿತ್ ಲಂಕೇಶ್​ಗೆ ಸಿಸಿಬಿ ನೋಟಿಸ್​

ಪೊಲೀಸ್ ಕಮೀಷನರ್ ವಿರುದ್ದ ಗರಂ ಆದ ಗೃಹ ಸಚಿವ...

ಹುಬ್ಬಳ್ಳಿ- ಧಾರವಾಡದಲ್ಲಿ ಸರಣಿ ಕೊಲೆಗಳು ನಡೆಯುತ್ತಿರುವುದು ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ವಿರುದ್ಧ ಗೃಹ ಸಚಿವರು ಗರಂ ಆಗಿದ್ದಾರೆ. ಪೊಲೀಸ್ ಕಮೀಷನರ್ ಆರ್. ದಿಲೀಪ್ ಅವರನ್ನು ಮನೆಗೆ ಕರೆಸಿ, ಬೊಮ್ಮಾಯಿ ಕ್ಲಾಸ್ ತಗೆದುಕೊಂಡರು. ಹುಬ್ಬಳ್ಳಿಯಲ್ಲಿ ಏನೇ ನಡೆದರೂ ನೀವೇ ಹೊಣೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ಬಿಟ್ಟು ಫೀಲ್ಡ್​ಗೆ ಇಳಿಯುವಂತೆ ಸೂಚನೆ ನೀಡಿದರು. ಮನೆಯಲ್ಲಿ ಕುಳಿತರೆ ಕ್ರೈಂ ಕಂಟ್ರೋಲ್​ಗೆ ಬರಲ್ಲ. ಶೂಟೌಟ್, ಡಬಲ್ ಮರ್ಡರ್​ನಂತಹ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ವಾರದಲ್ಲಿ ಕಾನೂನು ಸುವ್ಯವಸ್ಥೆ ಕಂಟ್ರೋಲ್​ಗೆ ಬರಬೇಕೆಂದು ಖಡಕ್ ಸೂಚನೆ ನೀಡಿದರು.

Last Updated : Aug 30, 2020, 12:38 PM IST

ABOUT THE AUTHOR

...view details