ಮಂಗಳೂರು: ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ನೀರು ಸರಬರಾಜಿನಲ್ಲಿ ರೇಶನಿಂಗ್ ಆರಂಭಿಸಲಾಗಿದೆ. ಅದರಂತೆ ಇಂದಿನಿಂದ ಎರಡು ದಿನಗಳ ಕಾಲ ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಇಂದಿನಿಂದ ಎರಡು ದಿನ ಮಂಗಳೂರಿಗೆ ಕುಡಿಯುವ ನೀರು ಸ್ಥಗಿತ! -
ತುಂಬೆ ಡ್ಯಾಂನ ನೀರಿನ ಮಟ್ಟ ಕ್ಷೀಣಿಸಿದ್ದು, ನಗರಕ್ಕೆ 48 ತಾಸುಗಳ ಕಾಲ ನೀರು ಪೂರೈಕೆ ಸ್ಥಗಿತಗೊಳಿಸಿ ನೀರು ಸರಬರಾಜಿನಲ್ಲಿ ರೇಶನಿಂಗ್ ಮಾಡಲಾಗುತ್ತಿದೆ.
ತುಂಬೆ ಡ್ಯಾಂನ
ತುಂಬೆ ಡ್ಯಾಂ
ಇಂದು ಬೆಳಗ್ಗೆ 6 ಗಂಟೆಯಿಂದ ಮೇ 3ರ ಬೆಳಗ್ಗೆ 6 ಗಂಟೆಯವರೆಗಿನ 48 ತಾಸು ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆವರೆಗೆ 96 ಗಂಟೆ ನೀರು ಸರಬರಾಜು ನಡೆಯಲಿದೆ.
ಏಪ್ರಿಲ್ ತಿಂಗಳಲ್ಲಿ ನೀರು ರೇಶನಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದರೂ ರಾಜಕಾರಣಿಗಳ ಒತ್ತಡದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ತುಂಬೆ ಡ್ಯಾಂನಲ್ಲಿ ನಿತ್ಯ ಸರಬರಾಜು ಮಾಡಿದರೆ ಈ ತಿಂಗಳ ಅಂತ್ಯಕ್ಕೆ ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲಾಗದಂತೆ ಡ್ಯಾಂ ಬತ್ತಲಿದ್ದು, ಇಂದಿನಿಂದಲೇ ರೇಶನಿಂಗ್ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.
Last Updated : May 1, 2019, 1:37 PM IST