ಮಂಗಳೂರು:ಇಲ್ಲಿನ ಸಮುದ್ರ ತೀರದಲ್ಲಿ ಹೂಳು ತೆಗೆಯುವ ಡ್ರೆಡ್ಜರ್ವೊಂದಕ್ಕೆ ನೀರು ಒಳನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಸಮುದ್ರದಲ್ಲಿ ಡ್ರೆಡ್ಜರ್ ಒಳಗೆ ನುಗ್ಗಿದ ನೀರು...13 ಸಿಬ್ಬಂದಿಯ ರಕ್ಷಣೆ
ಮಂಗಳೂರು ಸಮುದ್ರ ತೀರದಲ್ಲಿ ಹೂಳು ತೆಗೆಯುವ ಡ್ರೆಡ್ಜರ್ಗೆ ನೀರು ನುಗ್ಗಿದ್ದು, ಡ್ರಡ್ಜರ್ ಒಳಗಿದ್ದ 13 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಸಮುದ್ರದಲ್ಲಿ ಡ್ರಡ್ಜರ್ ಒಳಗೆ ನುಗ್ಗಿದ ನೀರು..!
ತ್ರಿದೇವಿ ಪ್ರೇಮ್ ಎಂಬ ಡ್ರೆಡ್ಜರ್ ಕೆಟ್ಟು ನಿಂತಿತ್ತು. ಈ ಡ್ರೆಡ್ಜರ್ಗೆ ರಾತ್ರಿ 2.30ರ ವೇಳೆಗೆ ಸಮುದ್ರದ ನೀರು ಒಳನುಗ್ಗಲು ಆರಂಭಿಸಿದ್ದು, ಡ್ರೆಡ್ಜರ್ನಲ್ಲಿದ್ದ 13 ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ರಕ್ಷಣಾ ಬೋಟ್ ಐಸಿಜಿಎಸ್ ಅಮರ್ತ್ಯ ರಕ್ಷಣಾ ಕಾರ್ಯ ಆರಂಭಿಸಿ ಡ್ರೆಡ್ಜರ್ನಲ್ಲಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ.