ಕರ್ನಾಟಕ

karnataka

ETV Bharat / state

ಮಂಗಳೂರು: ಸೋಂಕಿನ ವಿರುದ್ಧ ಹೋರಾಡಿದ ಎಎಸ್​ಐ ವಾರಿಯರ್ಸ್​ ಆಫ್ ದಿ ಡೇ! - ಮಂಗಳೂರಿನಲ್ಲಿ ಕೊರೊನಾ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಗ್ರಾಮಾಂತರ ಠಾಣೆ ಎಎಸ್​ಐ ರಂಜನ್​ ಕುಮಾರ್ ಕೊರೊನಾ ತಡೆಗೆ ವಹಿಸಿದ ವಿಶೇಷ ಕಾಳಜಿಗೆ ಇಲಾಖೆ ವತಿಯಿಂದ 'ವಾರಿಯರ್ಸ್ ಆಫ್ ದಿ ಡೇ' ಪ್ರಶಂಸೆ ನೀಡಲಾಗಿದೆ.

Warriors of the Day praise for AS I
ಎಎಸ್​ಐಗೆ ವಾರಿಯರ್ಸ್​ ಆಫ್ ದಿ ಡೇ ಪ್ರಶಂಸೆ

By

Published : Apr 16, 2020, 9:10 PM IST

ಮಂಗಳೂರು: ಕೋವಿಡ್-19 ಸೋಂಕು ತಡೆಗೆ ವಿದೇಶಗಳಿಂದ ಬಂದವರ ಮೇಲೆ ವಿಶೇಷ ನಿಗಾ ವಹಿಸಿ ಹೋಂ ಕ್ವಾರಂಟೈನ್ ಮಾಡುವ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡ ಮಂಗಳೂರು ಗ್ರಾಮಾಂತರ ಠಾಣೆಯ ಎಎಸ್ಐ ರಂಜನ್ ಕುಮಾರ್ ಕಾರ್ಯಕ್ಕೆ ಪೊಲೀಸ್ ಇಲಾಖೆಯಿಂದ ಶ್ಲಾಘನೆ ಜೊತೆಗೆ 'ವಾರಿಯರ್ಸ್ ಆಫ್ ದಿ ಡೇ' ಪ್ರಶಂಸೆಯೂ ಸಿಕ್ಕಿದೆ.

ಎಎಸ್​ಐಗೆ ವಾರಿಯರ್ಸ್​ ಆಫ್ ದಿ ಡೇ

ಅಲ್ಲದೆ ರಂಜನ್ ಕುಮಾರ್, ಆಶಾ ಕಾರ್ಯಕರ್ತೆಯರೊಂದಿಗೆ ಉತ್ತಮವಾದ ಸಂವಾಹನವನ್ನು ಸಾಧಿಸಿ ಹೋಂ ಕ್ವಾರಂಟೈನ್ ಆದವರು ಮನೆಯಿಂದ ಹೊರ ಬರದಂತೆ ಸೂಚನೆ ನೀಡುತ್ತಾ ಬಂದಿದ್ದಾರೆ.

ಅಲ್ಲದೆ ಅವರಿಗೆ ದೈನಂದಿನ ಅಗತ್ಯ ಸಾಮಗ್ರಿಗಳು ತಲುಪಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಸುತ್ತಿದ್ದಾರೆ. ಈ ಮೂಲಕ ಹೋಂ ಕ್ವಾರಂಟೈನ್​ನಲ್ಲಿರುವವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ABOUT THE AUTHOR

...view details