ಕರ್ನಾಟಕ

karnataka

ETV Bharat / state

ಪರೀಕ್ಷೆ ಮುಂದೂಡಲು ಗೋಡೆ ಬರಹ : ಇಬ್ಬರು ಅಪ್ರಾಪ್ತರು ವಶಕ್ಕೆ - Miners arreat

ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಈ ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ..

Wall writing
Wall writing

By

Published : Apr 27, 2021, 6:40 PM IST

ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಗೋಡೆ ಬರಹ ಬರೆದ ಇಬ್ಬರು ಅಪ್ರಾಪ್ತ ಬಾಲಕರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಈ ಇಬ್ಬರು ಅಪ್ರಾಪ್ತರು ಪರೀಕ್ಷೆ ಮುಂದೂಡಬೇಕೆಂಬ ಆಕಾಂಕ್ಷೆಯಿಂದ ದುರುದ್ದೇಶಪೂರಕವಾಗಿ ಪಂಪ್ ವೆಲ್‌ನ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದ ಪ್ಲೈಓವರ್ ಗೋಡೆಯ ಮೇಲೆ ಲಾಕ್ ಡೌನ್ ಆಗಬೇಕೆಂದು ಬರೆದಿದ್ದರು.

ಅಲ್ಲದೆ ಜೊತೆಗೆ ಅವಹೇಳಕಾರಿಯಾಗಿಯೂ ಗೀಚಿದ್ದರು‌. ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಈ ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.

ABOUT THE AUTHOR

...view details