ಬಂಟ್ವಾಳ: ಗೋಡೆ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿನಲ್ಲಿ ನಡೆದಿದೆ.
ಬಂಟ್ವಾಳ; ಶ್ರಮದಾನಕ್ಕೆಂದು ಹೋದ ವ್ಯಕ್ತಿ ಗೋಡೆ ಕುಸಿದು ಸಾವು - Bhantvala latest news
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೋಡೆ ಕುಸಿತ
ಶಂಭೂರು ನಿವಾಸಿ ಜನಾರ್ದನ (38) ಮೃತಪಟ್ಟ ವ್ಯಕ್ತಿ. ಮಾದುಕೋಡಿಯಲ್ಲಿ ನಡೆಯುತ್ತಿದ್ದ ಶ್ರಮದಾನದಲ್ಲಿ ಪಾಲ್ಗೊಳ್ಳುವುದಕ್ಕೆ ವ್ಯಕ್ತಿ ತೆರಳಿದ್ದು, ಈ ವೇಳೆ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.