ಮಂಗಳೂರು: ಕೋವಿಡ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ನಗರದ ಉರ್ವ ಮಾರುಕಟ್ಟೆಯನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಕೋವಿಡ್ ಭೀತಿ: ಮಂಗಳೂರಿನ ಉರ್ವ ಮಾರುಕಟ್ಟೆ ಸ್ವಯಂ ಪ್ರೇರಿತ ಬಂದ್! - ಮಂಗಳೂರಿನ ಉರ್ವ ಮಾರುಕಟ್ಟೆ ಸ್ವಯಂಪ್ರೇರಿತ ಬಂದ್
ಉರ್ವ ಮಾರುಕಟ್ಟೆಯ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 1ರವರೆಗೆ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನದ ಬಳಿಕ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ.
ಮಂಗಳೂರಿನ ಉರ್ವ ಮಾರುಕಟ್ಟೆ ಸ್ವಯಂಪ್ರೇರಿತ ಬಂದ್
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉರ್ವ ಮಾರುಕಟ್ಟೆಯ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ವ್ಯಾಪಾರ ವಹಿವಾಟು ನಡೆಸಿ ಮಧ್ಯಾಹ್ನದ ಬಳಿಕ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಶನಿವಾರ ಮಾತ್ರ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಮಾರುಕಟ್ಟೆ ತೆರೆದಿರುತ್ತದೆ.
ರವಿವಾರ ಸರ್ಕಾರವೇ ಲಾಕ್ಡೌನ್ ಆದೇಶ ಮಾಡಿರೋದರಿಂದ ಮಾಮೂಲಿ ಬಂದ್ ಇರಲಿದೆ. ಈ ಬಗ್ಗೆ ಮಾರುಕಟ್ಟೆ ಪ್ರದೇಶದಲ್ಲಿ ಬ್ಯಾನರ್ ಹಾಕಿ ಮಾಹಿತಿ ನೀಡಲಾಗಿದೆ.