ಕರ್ನಾಟಕ

karnataka

ETV Bharat / state

ಪೂಜೆ ಮಾಡುವ ಅರ್ಚಕರ ವೇಷದಲ್ಲೂ ಜಿಹಾದಿ ಪ್ರವೃತ್ತಿ ಬರಬಹುದು : ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ - ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಶಿವಮೊಗ್ಗ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಯುವತಿಯರು ಅನ್ಯ ಜಾತಿಯವರನ್ನು ವಿವಾಹವಾಗಬಾರದು ಅನ್ನುವ ಹೇಳಿಕೆಯನ್ನು ಸುಳ್ಳಾಗಿ ಪ್ರಕಟಿಸಲಾಗಿದೆ..

vishwaprasanna swamiji
ವಿಶ್ವಪ್ರಸನ್ನ ಸ್ವಾಮೀಜಿ

By

Published : Mar 21, 2021, 10:06 PM IST

Updated : Mar 21, 2021, 10:27 PM IST

ಉಳ್ಳಾಲ : ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿವೆ. ನಾವು ನಾವಾಗಿಯೇ ಉಳಿಯಲು ಸಂಸ್ಕೃತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಪ್ರಸನ್ನ ಸ್ವಾಮೀಜಿ

ಈ ವೇಳೆ ಮಾತನಾಡಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಜಿಹಾದಿಗಳಿದ್ದಾರೆ. ಶಿವಮೊಗ್ಗ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಯುವತಿಯರು ಅನ್ಯ ಜಾತಿಯವರನ್ನು ವಿವಾಹವಾಗಬಾರದು ಅನ್ನುವ ಹೇಳಿಕೆಯನ್ನು ಸುಳ್ಳಾಗಿ ಪ್ರಕಟಿಸಲಾಗಿದೆ.

ವರದಿ ಪ್ರಕಟಿಸಿರುವ ಮಾಧ್ಯಮದವರಲ್ಲಿ ವಿಡಿಯೋ ದಾಖಲೆ ಕೇಳಿದಾಗ ಅದನ್ನು ಸ್ಪಷ್ಟವಾಗಿ ನೀಡಿಲ್ಲ. ಅಂತಹ ಹೇಳಿಕೆಯನ್ನು ನೀಡದೇ ಇದ್ದರೂ, ಜನರಿಗೆ ಪತ್ರಿಕೆಗಳು ಹೇಳುವುದು ಸತ್ಯವಾಗುತ್ತದೆ.

ಜಿಹಾದಿ ಪ್ರವೃತ್ತಿ ಯಾವ ರೀತಿಯಲ್ಲೂ ಇರಬಹುದು. ಪೂಜೆ ಮಾಡುವ ಅರ್ಚಕರ ವೇಷದಲ್ಲೂ ಬರಬಹುದು. ಹಿಂದೂ ಸಮಾಜದಲ್ಲಿ ಒಡಕು ಹುಟ್ಟಿಸುವ ಪ್ರಯತ್ನಗಳು ನಿರಂತರವಾಗಿ ಆಗುತ್ತಿವೆ. ಇಂತಹ ಉದ್ದೇಶವನ್ನಿಟ್ಟುಕೊಂಡೇ ನಮ್ಮೊಳಗೆ ಒಡಕು ಮೂಡುವಂತಹ ವಿಚಾರಗಳನ್ನು ಪ್ರಚಾರಕ್ಕೆ ತರಲಾಗುತ್ತಿದೆ ಎಂದರು.

Last Updated : Mar 21, 2021, 10:27 PM IST

ABOUT THE AUTHOR

...view details