ಕರ್ನಾಟಕ

karnataka

ETV Bharat / state

ಪುತ್ತೂರು: ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಪುತ್ತೂರಿನ ವಿಶ್ವ ಹಿಂದೂ ಪರಿಷತ್ ಸದಸ್ಯರು ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು.

ಪುತ್ತೂರು
ಪುತ್ತೂರು

By

Published : Aug 12, 2020, 1:48 PM IST

ಪುತ್ತೂರು:ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯದಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಬಳಿಕ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್ ಮಾತನಾಡಿ, 1964 ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಮುಂಬೈ ಸಾಂದೀಪನಿ ಆಶ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘ ಚಾಲಕ ಪರಮ ಪೂಜ್ಯನೀಯ ಗುರೂಜಿ ಹಾಗೂ ಹಲವಾರು ಸಾಧು ಸಂತರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನೆಯಾಯಿತು. ಅಂದಿನಿಂದ ಇಂದಿನ ಹಲವು ಹಿಂದೂ ಪರ ಹೋರಾಟ ಹಾಗೂ ಹಿಂದೂ ಸಮಾಜದಲ್ಲಿ ಪರಿವರ್ತನೆ ಮಾಡಿದ ಕೀರ್ತಿ ವಿಶ್ವ ಹಿಂದೂ ಪರಿಷತ್ತಿಗೆ ಸಲ್ಲುತ್ತದೆ ಎಂದರು.

ಅಯೋಧ್ಯೆಯ ರಾಮಜನ್ಮಭೂಮಿ ಹೋರಾಟದ ನೇತೃತ್ವ ವಹಿಸಿ ಯಶಸ್ವಿಯಾಗಿರುವುದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ ಎಂದರು.

ಈ ವೇಳೆ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ, ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜಿತೇಶ್ ಬಲ್ನಾಡು, ಪುತ್ತೂರು ಪ್ರಖಂಡ ಸಂಯೋಜಕ ಹರೀಶ್ ಕುಮಾರ್ ದೊಳ್ಪಾಡಿ, ಪ್ರಖಂಡ ಸತ್ಸಂಗ ಪ್ರಮುಖ್ ರವಿಕುಮಾರ್ ಕೈತಡ್ಕ, ಬಜರಂಗದಳ ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಬಲ್ನಾಡು, ನಗರ ಕಾರ್ಯದರ್ಶಿ ರೂಪೇಶ್ ಮುರ, ಪ್ರಜ್ವಲ್ ಸಂಪ್ಯ, ಕೇಸವ ಪ್ರಸಾದ್, ಜೀವನ್ ಆಚಾರ್ಯ, ಹರ್ಷಿತ್ ಬಲ್ನಾಡು ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details