ಕರ್ನಾಟಕ

karnataka

ETV Bharat / state

ಎಪ್ರಿಲ್ 26ಕ್ಕೆ ಶ್ರೀರಾಮಚಂದ್ರಾಪುರ ಮಠದಿಂದ ವಿಷ್ಣುಗುಪ್ತ ವಿವಿ ಲೋಕಾರ್ಪಣೆ - ಶ್ರೀರಾಮಚಂದ್ರಾಪುರ ಮಠ

ಅನೇಕಾನೇಕ ಭಾರತದ ದೇಸಿ ವಿದ್ಯೆಗಳು ನಾಶವಾಗುತ್ತಿವೆ. ಇವುಗಳನ್ನು ಉಳಿಸುವ ಕಾರ್ಯವನ್ನು ವಿಷ್ಣುಗುಪ್ತ ದೇಸಿ ವಿಶ್ವವಿದ್ಯಾಲಯ ಮಾಡಲಿದೆ. 280 ಭಾರತೀಯ ಪುರಾತನ ವಿದ್ಯೆಗಳು, 12 ಫ್ಯಾಕಲ್ಟಿಗಳು, 80 ವಿಭಾಗಗಳನ್ನು ಸಂಕಲ್ಪಿಸಿದ್ದೇವೆ‌. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ ಹೇಳಿದರು.

Sriramachandrapur Mat in Gokarna
ಶ್ರೀ ರಾಘವೇಶ್ವರ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ

By

Published : Jan 24, 2020, 2:32 AM IST

ಮಂಗಳೂರು:ಭಾರತ ಹಾಗೂ ಪ್ರಪಂಚದಾದ್ಯಂತ ಬಹಳಷ್ಟು ವಿಶ್ವವಿದ್ಯಾನಿಲಯಗಳು ಕಾರ್ಯಾ ನಿರ್ವಹಿಸುತ್ತಿವೆ. ಆದರೆ ವಿಷ್ಣುಗುಪ್ತ ಎಂಬ ವಿಶಿಷ್ಟ ದೇಸಿ ವಿಶ್ವವಿದ್ಯಾನಿಲಯ ನೂರು ತಲೆಮಾರಿಗೆ ಒಂದು ಎಂಬಂತೆ ವಿದ್ಯಾರ್ಥಿಗಳ ಭವಿಷ್ಯ ವನ್ನು ಬೆಳಗಿಸಲಿದೆ‌ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.

ಶ್ರೀ ರಾಘವೇಶ್ವರ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ

ಭಾರತದ ದೇಸಿ ವಿದ್ಯೆಗಳು ಇದೀಗ ನಾಶವಾಗುತ್ತಿವೆ. ಇವುಗಳನ್ನು ಉಳಿಸುವ ಕಾರ್ಯವನ್ನು ವಿಷ್ಣುಗುಪ್ತ ದೇಸಿ ವಿಶ್ವವಿದ್ಯಾಲಯ ಮಾಡಲಿದೆ. ಹಿಂದೆ ಸಾಮವೇದಕ್ಕೆ ಸುಮಾರು ಸಾವಿರ ಶಾಖೆಗಳಿದ್ದವು. ಇಂದು ಗೌತಮಿ, ಜೈಮಿನಿ ಹಾಗೂ ರಣಾಯಿಣಿ ಎಂಬ ಕೇವಲ ಮೂರು ಶಾಖೆಗಳು ಮಾತ್ರ ಉಳಿದಿವೆ. ಆದ್ದರಿಂದ ನಾವು 280 ಭಾರತೀಯ ಪುರಾತನ ವಿದ್ಯೆಗಳು, 12 ಫ್ಯಾಕಲ್ಟಿಗಳು, 80 ವಿಭಾಗಗಳನ್ನು ಸಂಕಲ್ಪಿಸಿದ್ದೇವೆ‌. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸುಮಾರು 75 ಎಕರೆ ಸ್ಥಳದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾನಿಲಯವನ್ನು ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಆರಂಭಿಸಲಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಠದ ಇತರ ಶಾಖಾ ಮಠದಲ್ಲಿಯೂ ಈ ವಿವಿಯ ಶಾಖೆಗಳನ್ನು ಆರಂಭಿಸಲಾಗುತ್ತದೆ. ವಿಷ್ಣುಗುಪ್ತ ವಿವಿಯಲ್ಲಿ ಶುಲ್ಕ ಪಡೆಯಲಾಗುತ್ತದೆ. ಆದರೆ ಬಡವರಿಗೆ ಈ ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ವಿನಾಯಿತಿ ಇದೆ. ಎಪ್ರಿಲ್ 26ರಂದು‌ ಲೋಕಾರ್ಪಣೆಗೊಳ್ಳಲಿರುವ ಈ ವಿವಿಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗುತ್ತದೆ. ಮೊದಲಿಗೆ ಸುಮಾರು 50 ಕೋಟಿ ರೂ. ಹಣವನ್ನು ವಿನಿಯೋಗಿಸಲಾಗುತ್ತಿದೆ ಎಂದು ರಾಘವೇಶ್ವರ ಸ್ವಾಮೀಜಿ ಹೇಳಿದರು.

ABOUT THE AUTHOR

...view details