ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಉಲ್ಲಂಘನೆ: ಉಳ್ಳಾಲದಲ್ಲಿ 15 ಖಾಸಗಿ ಬಸ್ಸುಗಳಿಗೆ ಬಿತ್ತು ದಂಡ - Mangalure private bus news

ನೇತ್ರಾವತಿ ಸೇತುವೆ ಬಳಿ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಬಸ್ಸುಗಳನ್ನು ಪೊಲೀಸರು ತಡೆದು ದಂಡ ವಿಧಿಸಿದ್ದಾರೆ.

Bus
Bus

By

Published : Jun 3, 2020, 12:42 PM IST

ಉಳ್ಳಾಲ: ಕೋವಿಡ್-19 ಮುಂಜಾಗ್ರತಾ ಕ್ರಮದ ಆದೇಶವನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರೊಂದಿಗೆ ತಲಪಾಡಿ, ಕೊಣಾಜೆ, ಉಳ್ಳಾಲ ಕಡೆಗೆ ಚಲಿಸುತ್ತಿದ್ದ ಸುಮಾರು 15 ಬಸ್ಸುಗಳನ್ನು ನಾಗುರಿ ಸಂಚಾರಿ ಠಾಣಾ ಪೊಲೀಸರು ಜೆಪ್ಪು ನೇತ್ರಾವತಿ ಸೇತುವೆ ಬಳಿ ಮತ್ತು ನಾಟೆಕಲ್ ಸಮೀಪ ತಡೆದು ದಂಡ ವಿಧಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು 30-35 ಪ್ರಯಾಣಿಕರು ಮಾತ್ರ ಮಾಸ್ಕ್ ಧರಿಸಿ ಪ್ರಯಾಣಿಸಬೇಕು ಎನ್ನುವ ಆದೇಶವನ್ನು ಪಾಲಿಸುವಂತೆ ಸೂಚಿಸಿ, ಖಾಸಗಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ನಿಯಮಿತ ಬಸ್ಸುಗಳು ಮಾತ್ರ ರಸ್ತೆಗಿಳಿದರೂ ಕೂಡ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಸಂಚಾರಿ ಠಾಣಾ ಪೊಲೀಸರು ತೊಕ್ಕೊಟ್ಟು ಭಾಗದಿಂದ ಬರುವ ಬಸ್ಸುಗಳನ್ನು ಪಂಪ್ ವೆಲ್ ಬಳಿ ನಿಲ್ಲಿಸಿ ಹೆಚ್ಚುವರಿ ಇರುವ ಪ್ರಯಾಣಿಕರನ್ನು ಕೆಳಗಿಳಿಸಿದರು.

ನಿನ್ನೆ ಸಂಜೆ ಹೊತ್ತಿಗೆ ಜೆಪ್ಪು ಸೇತುವೆ ಮತ್ತು ನಾಟೆಕಲ್ ಬಳಿ 15 ರಷ್ಟು ಖಾಸಗಿ ಬಸ್ಸುಗಳನ್ನು ತಡೆದು ಅಧಿಕ ಪ್ರಯಾಣಿಕರು ಇರುವ ಬಸ್​ಗಳಿಗೆ ದಂಡ ವಿಧಿಸಿದರು.

ABOUT THE AUTHOR

...view details