ಕರ್ನಾಟಕ

karnataka

ETV Bharat / state

ಲಾಕ್​​ಡೌನ್ ಸಮಯದಲ್ಲಿ ಕಲಾ ನೈಪುಣ್ಯತೆ: ನಿರುಪಯುಕ್ತ ವಸ್ತುಗಳಿಂದ ಸುಂದರ ಕಲಾಕೃತಿ - ಮಂಗಳೂರು

ಬೆಂಗಳೂರಿನಲ್ಲಿ ಖ್ಯಾತ ಕಲಾ ನಿರ್ದೇಶಕ ಶಶಿಧರ್​ ಅಡಪರ ತಂಡದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ರಾಜ್ ಲಾಕ್​ಡೌನ್​ ಸಮಯದಲ್ಲಿ ನುಣುಪಾದ ಕಲ್ಲು, ಒಣಗಿದ ಅಣಬೆ, ಒಣಗಿದ ಹೂ, ಜೇನುಗೂಡು, ಕಾಯಿಗಳು, ಶೇಪ್ ಇರುವ ಮರದ ತುಂಡುಗಳನ್ನು ಸಂಗ್ರಹಿಸಿ ಈ ನಿರುಪಯುಕ್ತ ವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ರಚಿಸಿದ್ದಾರೆ.

beautiful artwork created  from useless materials
ನಿರುಪಯುಕ್ತ ವಸ್ತುಗಳಿಂದ ಸುಂದರ ಕಲಾಕೃತಿ ರಚಿಸಿದ ವಿನೋದ್ ರಾಜ್

By

Published : Jun 2, 2020, 11:22 PM IST

ಮಂಗಳೂರು:ಲಾಕ್​ಡೌನ್ ಸಮಯವನ್ನು ಪುತ್ತೂರಿನ ವಿನೋದ್ ರಾಜ್ ಎಂಬ ಯುವಕ ತನ್ನ ವಿಶಿಷ್ಟವಾದ ಪರಿಕಲ್ಪನೆಯ ಮೂಲಕ ಸದುಪಯೋಗ ಪಡಿಸಿಕೊಂಡಿದ್ದಾರೆ.

ನಿರುಪಯುಕ್ತ ವಸ್ತುಗಳಿಂದ ಸುಂದರ ಕಲಾಕೃತಿ ರಚಿಸಿದ ವಿನೋದ್ ರಾಜ್


ಬೆಂಗಳೂರಿನಲ್ಲಿ ಖ್ಯಾತ ಕಲಾ ನಿರ್ದೇಶಕ ಶಶಿಧರ್​ ಅಡಪರ ತಂಡದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ರಾಜ್ ಲಾಕ್​ಡೌನ್​ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ತಮ್ಮ ಮನೆಯಲ್ಲಿ ಲಾಕ್ ಆಗಿದ್ದರು. ಈ ಸಂದರ್ಭದಲ್ಲಿ ತೋಟ, ಪರಿಸರ, ಬೆಟ್ಟ, ಗುಡ್ಡ ಎಂದು ಅಡ್ಡಾಡುತ್ತಿರುವಾಗ ಕಣ್ಣಿಗೆ ಬಿದ್ದ ನುಣುಪಾದ ಕಲ್ಲು, ಒಣಗಿದ ಅಣಬೆ, ಒಣಗಿದ ಹೂ, ಜೇನುಗೂಡು, ಕಾಯಿಗಳು, ಶೇಪ್ ಇರುವ ಮರದ ತುಂಡುಗಳನ್ನು ಸಂಗ್ರಹಿಸಿದ್ದಾರೆ. ಮನೆಗೆ ತಂದಿರುವ ಈ ನಿರುಪಯುಕ್ತ ವಸ್ತುಗಳಿಂದ ಏನಾದರೂ ಮಾಡಬಹುದಲ್ಲಾ ಎಂದು ಯೋಚಿಸಿದ ಅವರು ಸುಂದರ ಕಲಾಕೃತಿಗಳನ್ನು ರಚಿಸಿತ್ತಾ ಹೋಗಿದ್ದಾರೆ. ಲಾಕ್​ಡೌನ್ ಎರಡು ತಿಂಗಳ ಅವಧಿಯಲ್ಲಿ ಪ್ರಕೃತಿ ದತ್ತವಾಗಿ ದೊರಕಿರುವ ಈ ನಿರುಪಯುಕ್ತ ವಸ್ತುಗಳಿಂದ ಸುಮಾರು 40-50 ಸುಂದರ ಕಲಾಕೃತಿಗಳನ್ನು ರಚಿಸಿದ್ದಾರೆ.

ತೆಂಗಿನ ತಾಜ್ಯದಿಂದ ಆಕರ್ಷಣೀಯ ಹೂಕುಂಡ, ಕಾಗೆ, ಬೋನ್ಸಾಯ್ ಗಿಡ, ಬೃಹದಾಕಾರದ ಅಣಬೆಯಿಂದ ಗ್ರಾಮಫೋನ್, ಹೂದಾನಿ, ಗೆರಟೆ, ಮರದ ತುಂಡುಗಳಿಂದ ವಿವಿಧ ಕಲಾಕೃತಿಗಳನ್ನು ರಚಿಸಿದ್ದಾರೆ.

ಮೂಲತಃ ಕಲಾ ವಿದ್ಯಾರ್ಥಿಯಾಗಿರುವ ವಿನೋದ್ ರಾಜ್ ಹಾಸನದ ನಿರ್ಮಲ ಚಿತ್ರಕಲಾ ವಿದ್ಯಾಲಯದಲ್ಲಿ 5 ವರ್ಷದ ಕಲಾ ಪದವಿ ಪಡೆದಿದ್ದಾರೆ‌. ಅದೇ ರೀತಿ ಮೈಸೂರಿನ ಕಲಾನಿಕೇತನ ಕಲಾ ವಿದ್ಯಾಲಯದಲ್ಲಿ ಎಂಎಫ್ಎ ಪದವಿ ಪಡೆದಿದ್ದಾರೆ. ಕಳೆದ 9 ವರ್ಷಗಳಿಂದ ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪರ 'ಪ್ರತಿರೂಪಿ' ಸಂಸ್ಥೆಯಲ್ಲಿ ಕಲಾನಿಪುಣತೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಶಿಧರ ಅಡಪರ ಗರಡಿಯಲ್ಲಿ ವಿನೋದ್ ರಾಜ್ ಅಲ್ಲಮ, ಇದೊಳ್ಳೆ ರಾಮಾಯಣ, ಉಪ್ಪಿನ ಕಾಗದ, ಯಜಮಾನ (ದರ್ಶನ್ ಅಭಿನಯಿಸಿರುವ) ಸಿನಿಮಾದಲ್ಲಿ ಕಲಾ ನಿರ್ದೇಶನ ತಂಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿರುವ ಗುತ್ತಿನ ಮನೆಯ ಕಲಾವಿನ್ಯಾಸದಲ್ಲಿ, ಹಲವಾರು ನಾಟಕಗಳ ರಂಗಸಜ್ಜಿಕೆಯಲ್ಲಿಯೂ ಶಶಿಧರ ಅಡಪರ ತಂಡದಲ್ಲಿ ತನ್ನ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ. ಅಲ್ಲದೆ ಕಳೆದ ಐದಾರು ವರ್ಷಗಳಿಂದ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸ್ತಬ್ಧಚಿತ್ರ ರಚನೆಯಲ್ಲೂ ತನ್ನ ಕೈಚಳಕ ತೋರಿಸುತ್ತಿದ್ದಾರೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ವಿನೋದ್ ರಾಜ್, ಇಂದು ಯಾವುದೇ ಕಲಾಕೃತಿ ರಚನೆಗೂ ಥರ್ಮಾಕೋಲ್, ಪ್ಲಾಸ್ಟಿಕ್, ರಟ್ಟು ಇತ್ಯಾದಿಗಳನ್ನು ಬಳಸಲಾಗುತ್ತದೆ. ಆದರೆ ಪ್ರಕೃತಿದತ್ತವಾದ ಮರಮಟ್ಟು, ತೆಂಗಿನ ತ್ಯಾಜ್ಯ, ಗೆರಟೆ, ಕಲ್ಲು, ಕಾಯಿ, ಹೂಗಳನ್ನು ಬಳಸಿಯೂ ಸುಂದರವೂ, ಆಕರ್ಷಣೀಯವೂ ಆದ ಕಲಾಕೃತಿಗಳನ್ನು ರಚಿಸಲು ಸಾಧ್ಯ. ಇಂತಹ ಕಲಾ ಪ್ರಕಾರಗಳು ಮಕ್ಕಳಿಗೆ ಇಷ್ಟವಾಗಬೇಕು. ಅವರು ಕೂಡ ಇಂತಹ ಕಲಾತ್ಮಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಕಲಾಕೃತಿಗಳನ್ನು ರಚಿಸಿದ್ದೇನೆ ಎಂದರು.

ABOUT THE AUTHOR

...view details