ಕರ್ನಾಟಕ

karnataka

ETV Bharat / state

ಮಂಗಳೂರು ನಗರ ನೂತನ ಪೊಲೀಸ್​ ಆಯುಕ್ತರಾಗಿ ವಿಕಾಸ್​ ಕುಮಾರ್​ ಅಧಿಕಾರ ಸ್ವೀಕಾರ - ಮಂಗಳೂರು ನೂತನ ಪೊಲೀಸ್​ ಆಯುಕ್ತ

ಇಂದು ಮಂಗಳೂರು ನಗರ ನೂತನ ಪೊಲೀಸ್​ ಆಯುಕ್ತರಾಗಿ ವಿಕಾಸ್​ ಕುಮಾರ್​ ಅಧಿಕಾರ ಸ್ವೀಕರಿಸಿದರು.

Vikas Kumar
Vikas Kumar

By

Published : Jun 29, 2020, 2:39 PM IST

ಮಂಗಳೂರು:ನಗರದ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಡಾ. ಪಿ.ಎಸ್.ಹರ್ಷ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ, ನಕ್ಸಲ್ ನಿಗ್ರಹ ಪಡೆಯ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಕಾಸ್ ಕುಮಾರ್ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ರಾಜ್ಯ ಸರ್ಕಾರ ನಿಯೋಜನೆ ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ ಇಂದು ಅವರು ಅಧಿಕಾರ ಸ್ವೀಕರಿಸಿದರು.

ವಿಕಾಸ್ ಕುಮಾರ್ ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ABOUT THE AUTHOR

...view details