ಉಳ್ಳಾಲ:ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್, ಕಾಣಿಕೆ ಡಬ್ಬಿ ಕಳವು; ವಿಹೆಚ್ಪಿ ಸಂಚಾಲಕನ ಬಂಧನ! - Manjanadi Temple hundi stolen at ullala
ದೇವಾಲಯದ ಕಾಣಿಕೆ ಡಬ್ಬಿ ಹಾಗೂ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
![ಬೈಕ್, ಕಾಣಿಕೆ ಡಬ್ಬಿ ಕಳವು; ವಿಹೆಚ್ಪಿ ಸಂಚಾಲಕನ ಬಂಧನ! vhp-leader-taranath-mohan-arrested](https://etvbharatimages.akamaized.net/etvbharat/prod-images/768-512-10920957-thumbnail-3x2-sanju.jpg)
ಹಿಂದೂ ಸಂಘಟನೆ ಸಂಚಾಲಕನ ಬಂಧನ
ಬೈಕ್, ಕಾಣಿಕೆ ಡಬ್ಬಿ ಕಳವು ಸಿಸಿಟಿವಿಯಲ್ಲಿ ಸೆರೆ
ಓದಿ:ನಕಲಿ ಆಧಾರ್ ಕಾರ್ಡ್ ತೋರಿಸಿ ಅಪ್ರಾಪ್ತೆ ಮದುವೆ: ವರನ ಕುಟುಂಬ ಪರಾರಿ!
ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಮಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆ ಸಾರ್ವಜನಿಕರು ಆತನನ್ನು ಹಿಡಿದು ಹತ್ತಿರದ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.