ಮಂಗಳೂರು:ಲವ್ ಜಿಹಾದ್ಗೆ ನೆರವು ನೀಡುತ್ತಿರುವ ನಿಷೇಧಿತ ಪಿಎಫ್ಐ ಸಂಘಟನೆಯ ಶಾಹಿನ್ ಗ್ಯಾಂಗ್ ಮುಸ್ಲಿಂ ಮಹಿಳಾ ತಂಡದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ ದುರ್ಗಾ ವಾಹಿನಿ ಆಗ್ರಹಿಸಿದೆ.
ಮಂಗಳೂರು ನಗರ ಡಿಸಿಪಿ ಅಂಶುಕುಮಾರ್ ಅವರಿಗೆ ಮನವಿ ನೀಡಿರುವ ವಿಶ್ವ ಹಿಂದೂ ಪರಿಷತ್ ದುರ್ಗಾ ವಾಹಿನಿ, ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಹಿಂದೂ ಯುವಕನೆಂದು ನಂಬಿಸಿ, ಚಿಕ್ಕಮಗಳೂರು ಕಳಸದ ಯುವತಿಯನ್ನು ಲವ್ ಜಿಹಾದ್ ಮಾಡಿರುವ ಪ್ರಕರಣದಲ್ಲಿ ದೇಶ ದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿದೆ.