ಮಂಗಳೂರು: ಮುಸ್ಲಿಂ ಮುಖಂಡರಿಗೆ ನಿಜವಾದ ಸಾಮಾಜಿಕ ಕಳಕಳಿಯಿದ್ದಲ್ಲಿ ಕೊರಗಜ್ಜನ ವೇಷ ಹಾಕಿ ಅವಮಾನ ಮಾಡಿರುವ ಮುಸ್ಲಿಂ ವರನನ್ನು ಜಮಾಅತ್‌ನಿಂದ ಹೊರಗೆ ಹಾಕಿ ಫತ್ವಾ ಜಾರಿಗೊಳಿಸಲಿ ಎಂದು ವಿಎಚ್ಪಿ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದರು.
ನಗರದ ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಕೊರಗಜ್ಜನ ವೇಷ ಹಾಕಿರುವುದನ್ನು ಮುಸ್ಲಿಂ ಮುಖಂಡರು ಖಂಡಿಸುತ್ತಿದ್ದಾರೆ. ಅದೇ ರೀತಿ ಇನ್ನೊಂದೆಡೆ, ಯಾರು ಈ ಕೃತ್ಯ ನಡೆಸಿದ್ದಾರೋ ಅವರ ಮನೆಗೆ ಹೋಗಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುವುದು ಬೇಡ ಎಂದು ಹೇಳಿದರು.
ಮುಸ್ಲಿಮರು ಆರಾಧನೆ ಮಾಡುವ ಮಹಮ್ಮದ್ ಪೈಗಂಬರ್ ಅವರ ಹೆಸರು ಬರೆದು ನಾನು ಕುತ್ತಿಗೆಗೆ ಹಾಕಿ ನರ್ತನ ಮಾಡಿದರೆ ಅವರು ಬಿಡುತ್ತಿರಲಿಲ್ಲ. ಖಂಡಿತವಾಗಿ ಬೆಂಕಿ ಹಚ್ಚುತ್ತಿದ್ದರು. ಅವರು ಎಷ್ಟು ಬೇಕಾದರೂ ನರ್ತನ ಮಾಡಲಿ, ಅದರಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುವುದು ಬೇಡ. ಆದ್ದರಿಂದ, ಜಿಲ್ಲಾಧಿಕಾರಿಯವರು, ಮುಸ್ಲಿಂ ಧಾರ್ಮಿಕ ಮುಖಂಡರು ಈ ಬಗ್ಗೆ ಈಗಲೇ ಎಚ್ಚೆತ್ತು ಜಾಗೃತರಾಗಿ ಮುಸ್ಲಿಂ ಯುವಕರಿಗೆ ತಿಳಿ ಹೇಳುವುದು ಉತ್ತಮ.