ಕರ್ನಾಟಕ

karnataka

ETV Bharat / state

ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ - congress leader Oscar Fernandes

ಕಳೆದ ಒಂದು ತಿಂಗಳಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫರ್ನಾಂಡಿಸ್ ಅವರಿಗೆ ಒಂದು ಬಾರಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಪ್ರಜ್ಞೆ ಬರಬಹುದು ಎಂದು ನಿರೀಕ್ಷಿಸಲಾಗಿದ್ದರೂ ಪ್ರಜ್ಞೆ ಮರುಕಳಿಸದೆ ಕೋಮಾಸ್ಥಿತಿಗೆ ತಲುಪಿದ್ದರು.

Oscar Fernandes is no more
ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ

By

Published : Sep 13, 2021, 2:52 PM IST

Updated : Sep 13, 2021, 3:37 PM IST

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಯೋಗ ಮಾಡುವ ವೇಳೆ ಬಿದ್ದು ತಲೆಗೆ ಗಾಯವಾಗಿದ್ದು ಕೋಮಸ್ಥಿತಿಯಲ್ಲಿದ್ದ ಫರ್ನಾಂಡಿಸ್ ಇಂದು ನಿಧನರಾದರು. ಆಸ್ಕರ್ ಅವರಿಗೆ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​

ಇದನ್ನೂ ಓದಿ: ಆಸ್ಕರ್ ಆರೋಗ್ಯ ವಿಚಾರಿಸಿ ಬಂದು ಆಸ್ಪತ್ರೆ ಮುಂದೆ ಗಳಗಳನೆ ಅತ್ತ ಜನಾರ್ದನ ಪೂಜಾರಿ

ಕಳೆದೊಂದು ತಿಂಗಳಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಒಂದು ಬಾರಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಪ್ರಜ್ಞೆ ಬರಬಹುದು ಎಂದು ನಿರೀಕ್ಷಿಸಲಾಗಿದ್ದರೂ ಪ್ರಜ್ಞೆ ಮರುಕಳಿಸದೆ ಕೋಮಸ್ಥಿತಿಯಲ್ಲೇ ಇದ್ದರು.

ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಮೊದಲಾದವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

Last Updated : Sep 13, 2021, 3:37 PM IST

ABOUT THE AUTHOR

...view details