ಕರ್ನಾಟಕ

karnataka

By

Published : Mar 14, 2023, 10:17 PM IST

ETV Bharat / state

ಚುನಾವಣಾ ಹೊಸ್ತಿಲಲ್ಲಿ ಸುಳ್ಳು ಆರೋಪ: ಶಾಸಕ ಭರತ್ ಶೆಟ್ಟಿಯನ್ನು ಧರ್ಮಸ್ಥಳದಲ್ಲಿ ಆಣೆಗೆ ಆಹ್ವಾನಿಸಿದ ಮೊಯ್ದಿನ್ ಬಾವಾ

ನಾನು ದೇವಾಲಯಗಳಿಗೆ ಹೋಗಿ ಈಗಲೂ ಪ್ರಸಾದ ಸ್ವೀಕರಿಸುತ್ತೇನೆ‌. ಇದಕ್ಕೆ ದಾಖಲೆಗಳಿವೆ. ನಾನು ನನ್ನ ಧರ್ಮದ ಜೊತೆಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಮಾಜಿ ಶಾಸಕ ಮೊಯ್ದಿನ್​ ಬಾವಾ.

verbal-fifght-between-two-mlas-from-mangaluru
ಚುನಾವಣಾ ಹೊಸ್ತಿಲಲ್ಲಿ ಸುಳ್ಳಾರೋಪ: ಶಾಸಕ ಭರತ್ ಶೆಟ್ಟಿಯನ್ನು ಧರ್ಮಸ್ಥಳದಲ್ಲಿ ಆಣೆಗೆ ಆಹ್ವಾನಿಸಿದ ಮೊಯ್ದಿನ್ ಬಾವಾ

ಚುನಾವಣಾ ಹೊಸ್ತಿಲಲ್ಲಿ ಸುಳ್ಳಾರೋಪ: ಶಾಸಕ ಭರತ್ ಶೆಟ್ಟಿಯನ್ನು ಧರ್ಮಸ್ಥಳದಲ್ಲಿ ಆಣೆಗೆ ಆಹ್ವಾನಿಸಿದ ಮೊಯ್ದಿನ್ ಬಾವಾ

ಮಂಗಳೂರು:ದೇವಸ್ಥಾನದ ಪ್ರಸಾದವನ್ನು ಕಾಲಡಿಗೆ ಹಾಕಿ ತುಳಿಯುತ್ತಾರೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ವಿರುದ್ಧ ಶಾಸಕ‌ ಭರತ್ ಶೆಟ್ಟಿ ಆರೋಪ ಮಾಡಿದ್ದು, ಇದಕ್ಕೆ ಮೊಯ್ದಿನ್ ಬಾವ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ತಿರುಗೇಟು ನೀಡಿದ್ದಾರೆ.

ನಾನು ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆಮಾಡಲು ಸಿದ್ಧ. ನಾನು ಬರುತ್ತೇನೆ ಅವರೂ ಬರಲಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸವಾಲೆಸದರು. ನಾನು ದೇವಾಲಯಗಳಿಗೆ ಹೋಗಿ ಈಗಲೂ ಪ್ರಸಾದ ಸ್ವೀಕರಿಸುತ್ತೇನೆ‌. ಇದಕ್ಕೆ ದಾಖಲೆಗಳಿವೆ. ನಾನು ನನ್ನ ಧರ್ಮದ ಜೊತೆಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಶಾಸಕ ಅವಧಿಯಲ್ಲಿ ದೇವಸ್ಥಾನ, ಬಿಲ್ಲವ ಸಮುದಾಯ ಹಾಗೂ ಅಂಬೇಡ್ಕರ್ ಭವನಗಳಿಗೆ ಎಷ್ಟು ಅನುದಾನ ತಂದಿರುವುದಕ್ಕೆ ಆರ್​ಟಿಐನಿಂದ ದಾಖಲೆ ತೆಗೆದುಕೊಂಡು ಪರಿಶೀಲಿಸಲಿ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನಕ್ಕೆ 58 ಕೋಟಿ ಅನುದಾನವನ್ನು ತಾನು ತಂದಿದ್ದೆ. ಆ ಅನುದಾನವನ್ನು ಭರತ್ ಶೆಟ್ಟಿ ಅವರು ತನ್ನ ಅನುದಾನದಲ್ಲಿ 40 ಕೋಟಿಯನ್ನು ಬೇರೆ ವಾರ್ಡ್​ಗಳ ವಿವಿಧ ಕಾಮಗಾರಿಗಳಿಗೆ ಹಂಚಿರುವ ದಾಖಲೆ ನನ್ನ ಬಳಿ ಇದೆ. ಹಿಂದುತ್ವದ ಪರವಾಗಿ ಮಾತನಾಡುವ ಶಾಸಕರು ಹಿಂದುಗಳಿಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಿ. ಗೋಹತ್ಯೆ ವಿರೋಧಿಸುವ ಇವರು, ಕಪಿಲಾ ಗೋಶಾಲೆಯ ಎರಡು ಎಕರೆ ಸ್ಥಳವನ್ನು ಕೋಸ್ಟಲ್ ಗಾರ್ಡ್​ಗೆ ನೀಡಿ ಶೆಡ್ ಒಡೆಯುವಾಗ ಗೋವುಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಕನಿಕರ ತೋರಿರಲಿಲ್ಲ. ಇವರು ವೈದ್ಯರಾಗಲು ಅನರ್ಹರು ಎಂದು ಕಿಡಿಕಾರಿದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್​ನಲ್ಲಿ ಪದೇ ಪದೇ ಬೆಂಕಿ ಅನಾಹುತ ಸಂಭವಿಸುತ್ತಿದ್ದು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಇಂದಿನವರೆಗೆ ಸ್ಥಳಕ್ಕೆ ಭೇಟಿ ನೀಡಿದೆ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮೂಲಕ ಪರಿಸರ ಮತ್ತು ಜನತೆಯ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17 ರಂದು ಸಂಜೆ 4ಕ್ಕೆ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದರು.

ಆರೋಪ ಏನು?:ಕಾವೂರಿನಲ್ಲಿ ಬಿಜೆಪಿ ‘‘ವಿಜಯ ಸಂಕಲ್ಪ ಯಾತ್ರೆ’’ಯಲ್ಲಿ ಮಾತನಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಮಾಜಿ ಶಾಸಕ ಮೊಯ್ದಿನ್ ಬಾವ ವಿರುದ್ದ ಆರೋಪ ಮಾಡಿದ್ದರು. ಅಂದಿನ ಸಭೆಯಲ್ಲಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು, ‘‘ನಾವು ಅಭಿವೃದ್ಧಿ ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತೇವೆ. ಇದಕ್ಕಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಅಭಿವೃದ್ಧಿ ಮತ್ತು ಹಿಂದುತ್ವದ ಜೊತೆ ಮಂಗಳೂರು ಉತ್ತರ ಕ್ಷೇತ್ರ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಆದರೆ, ಈಗ ಕೆಲವು ಸಮಯಗಳಿಂದ ಕ್ಷೇತ್ರದಲ್ಲಿ ಬಾವ ಮತ್ತು ಅಲಿ ಅಂತಂದ್ರೆ ಬಾವಲಿ ತಿರುಗಾಡುತ್ತಿದೆ, ಒಬ್ಬನಲ್ಲಿ ದುಡ್ಡಿದೆಯಂತೆ, ಇನ್ನೊಬ್ಬನಲ್ಲಿ ಚೆಕ್​ಬೌನ್ಸ್ ಮಾಡುವ ಕೆಪ್ಯಾಸಿಟಿ ಇದೆಯಂತೆ.

ಇವರಲ್ಲಿ ಅಷ್ಟು ದುಡ್ಡಿದ್ರೆ ಕೋವಿಡ್ ಸಮಯದಲ್ಲಿ ಎಲ್ಲಿ ಸತ್ತೋಗಿದ್ರು? ದೇವಸ್ಥಾನಕ್ಕೆ ಹೋಗುತ್ತಾರೆ, ಕೋಲ, ನೇಮೋತ್ಸವ, ಯಕ್ಷಗಾನ ಎಲ್ಲಾ ಕಡೆ ಹೋಗುತ್ತಾರೆ, ನೀವು ಅವರಲ್ಲಿ ಕೇಳಿ ಅಲ್ಲಿ ತಗೊಂಡ ಗಂಧ ಪ್ರಸಾದ ಏನು ಮಾಡ್ತಾರೆ? ಅಲ್ಲೇ ಕಾಲಡಿಗೆ ಹಾಕ್ತಾರೆ ಇಲ್ಲಾ ಕಾರಲ್ಲಿ ಇಡ್ತಾರೆ? ಬಾವಲಿ ಅದರಷ್ಟಕ್ಕೆ ತಿರುಗಾಡಿಕೊಂಡಿರಲಿ. ನಾವು ನಮ್ಮ ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡೋಣ’’ ಎಂದು ಹೇಳಿದ್ದರು.

ಇದನ್ನೂ ಓದಿ:ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

ABOUT THE AUTHOR

...view details