ಸುಳ್ಯ (ದಕ್ಷಿಣಕನ್ನಡ):ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರದ ಅಸಮರ್ಪಕ ಲಾಕ್‌ಡೌನ್ ನಿಯಮಗಳೇ ಕಾರಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯಿತಿ ಸದಸ್ಯ ಎಂ. ವೆಂಕಪ್ಪಗೌಡ ಆರೋಪಿಸಿದ್ದಾರೆ.
ಅಸಮರ್ಪಕ ನಿಯಮಗಳಿಂದ ಸೋಂಕು ಪ್ರಕರಣಗಳು ಏರಿಕೆ: ವೆಂಕಪ್ಪಗೌಡ ಆರೋಪ - ಎಂ.ವೆಂಕಪ್ಪಗೌಡ ಲೇಟೆಸ್ಟ್ ನ್ಯೂಸ್
ರಾಜ್ಯಾದ್ಯಂತ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗಲು ಕೇಂದ್ರ ಸರ್ಕಾರದ ಅಸಮರ್ಪಕ ಲಾಕ್‌ಡೌನ್ ನಿಯಮಗಳೆ ಕಾರಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪಗೌಡ
![ಅಸಮರ್ಪಕ ನಿಯಮಗಳಿಂದ ಸೋಂಕು ಪ್ರಕರಣಗಳು ಏರಿಕೆ: ವೆಂಕಪ್ಪಗೌಡ ಆರೋಪ Venkappa gowda](https://etvbharatimages.akamaized.net/etvbharat/prod-images/768-512-7278729-thumbnail-3x2-godu.jpg)
ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ದೇಶಕ್ಕೆ ಕಾಲಿಟ್ಟ ಆರಂಭದಲ್ಲಿ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿತ್ತು. ಅದೇ ಗಂಭೀರತೆ ಈಗ ಕಾಣುತ್ತಿಲ್ಲ. ಪ್ರಧಾನಿಯ ಗಂಭೀರತೆ ನೋಡಿ ಜನ ಹಿಂದೆ ಮುಂದೆ ನೋಡದೆ ಚಪ್ಪಾಳೆ ತಟ್ಟಿ, ದೀಪಾ ಬೆಳಗಿಸಿದ್ದರು. ಇಂದು ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಆಪಾದಿಸಿದರು.
ಹೊರ ರಾಜ್ಯಗಳಿಂದ ಊರಿಗೆ ಬರುತ್ತಿರುವವರಲ್ಲಿ ಕೊರೊನಾ ಪತ್ತೆ ಆಗುತ್ತಿದೆ. ಆರಂಭದಲ್ಲಿ ಲಾಕ್‌ಡೌನ್ ಹೇರಿದ್ದ ವಿಧಾನ ಸರಿಯಿಲ್ಲ. ಹೊರ ರಾಜ್ಯ, ಜಿಲ್ಲೆಗಳಲ್ಲಿ ಇರುವವರು ತಮ್ಮ ಊರಿಗೆ ಹಿಂತಿರುಗಲು 4- 5 ದಿನ ಅವಕಾಶ ಕೊಟ್ಟು ಲಾಕ್‌ಡೌನ್ ಜಾರಿಗೊಳಿಸಬೇಕಾಗಿತ್ತು. ಆಗ ಕೊರೊನಾ ಹೆಚ್ಚಾಗುವ ಸಾಧ್ಯತೆ ಇರುತ್ತಿರಲಿಲ್ಲ ಎಂದರು.