ಬಂಟ್ವಾಳ (ದ.ಕ):ಕೇರಳದಿಂದ ಕರ್ನಾಟಕಕ್ಕೆ ನಿಯಮವನ್ನು ಉಲ್ಲಂಘಿಸಿ ಗಡಿಯಲ್ಲಿ ಜನ ಸಾಗಾಟದಲ್ಲಿ ತೊಡಗಿದ್ದ ವಾಹನಗಳನ್ನು ಹಾಗೂ ರಸ್ತೆಯಲ್ಲಿ ಅಪಾಯಕಾರಿಯಾಗಿ ಓಡಾಡುತ್ತಿದ್ದ ದ್ವಿಚಕ್ರವಾಹನಗಳನ್ನು ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರ ತಂಡ ವಶಕ್ಕೆ ಪಡೆದಿರುವ ಘಟನೆ ಪೆರುವಾಯಿ ಕಡಂಬಿಲದಲ್ಲಿ ನಡೆದಿದೆ.
ಕೇರಳ ಮೂಲದ ಟೂರಿಸ್ಟ್ ವಾಹನ, ಟೂರಿಸ್ಟ್ ಆಟೋ ರಿಕ್ಷಾ, ಎರಡು ಕೇರಳದ ಹಾಗೂ ಒಂದು ಕರ್ನಾಟಕದ ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆರಿಪದವು ಮೂಲಕ ಪೆರುವಾಯಿ ಹಾಗೂ ಶಿರಂಕಲ್ಲು ಸಂಪರ್ಕಿಸುವ ರಸ್ತೆ ಇದ್ದು, ಇದಕ್ಕೆ ಗಡಿಯಲ್ಲಿ ಮಣ್ಣು ಹಾಕಿ ಸಂಪರ್ಕ ಕಡಿತ ಮಾಡಿದ್ದರೂ ಅಕ್ರಮವಾಗಿ ಓಡಾಟದ ಪ್ರಯತ್ನ ಮಾಡಿದ್ದಾರೆ.