ಕರ್ನಾಟಕ

karnataka

ETV Bharat / state

ನೆಲ್ಯಾಡಿಯಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ತರಕಾರಿ ವಾಹನ ಪಲ್ಟಿ - ನೆಲ್ಯಾಡಿ ಬಳಿ ತರಕಾರಿ ವಾಹನ ಪಲ್ಟಿ

ಹಾಸನದಿಂದ ಪುತ್ತೂರಿಗೆ ತೆರಳುತ್ತಿದ್ದ ತರಕಾರಿ ಸಾಗಾಟದ ವಾಹನವೊಂದು ನೆಲ್ಯಾಡಿ ಸಮೀಪ ಪಲ್ಟಿಯಾಗಿದ್ದು, ರಸ್ತೆಯಲ್ಲಿನ ಹೊಂಡ-ಗುಂಡಿ ತಪ್ಪಿಸಲು ಹೋಗಿ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ.

A Vegetable Carrier Van Overturned
ಪಲ್ಟಿಯಾದ ತರಕಾರಿ ವಾಹನ

By

Published : Oct 22, 2020, 4:49 PM IST

ನೆಲ್ಯಾಡಿ(ದಕ್ಷಿಣ ಕನ್ನಡ): ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ-ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತರಕಾರಿ ಸಾಗಾಟದ ವಾಹನವೊಂದು ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.

ಪಲ್ಟಿಯಾದ ತರಕಾರಿ ವಾಹನ

ಹಾಸನ ಮೂಲದ ತರಕಾರಿ ಸಾಗಾಟದ ವಾಹನ ಇಂದು ಬೆಳಗಿನ ಜಾವ ಪುತ್ತೂರಿಗೆ ತೆರಳುತ್ತಿದ್ದು, ಈ ವೇಳೆ ರಸ್ತೆಯಲ್ಲಿ ಇರುವ ಬೃಹತ್ ಗುಂಡಿಗಳನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ABOUT THE AUTHOR

...view details