ಪುತ್ತೂರು (ದಕ್ಷಿಣ ಕನ್ನಡ):ಪುತ್ತೂರಿನ ಬೊಳ್ವಾರಿನಲ್ಲಿ ಮತ್ತು ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಇಂದು ದಿಢೀರನೆ ವೀರ ಸಾವರ್ಕರ್ ವೃತ್ತ ಎಂದು ಬರೆದಿರುವ ಬ್ಯಾನರ್ ಕಾಣಿಸಿಕೊಂಡಿದೆ.
ಪುತ್ತೂರಿನ ವೃತ್ತಗಳಲ್ಲಿ ದಿಢೀರನೆ ಕಾಣಿಸಿಕೊಂಡ 'ವೀರ ಸಾವರ್ಕರ್ ವೃತ್ತ' ಬ್ಯಾನರ್ - ಪುತ್ತೂರಿನ ಬೋಳ್ವಾರು ಜಂಕ್ಷನ್
ಪುತ್ತೂರಿನ ಸರ್ಕಾರಿ ಅಸ್ಪತ್ರೆಯ ಬಳಿಯ ವೃತ್ತ ಹಾಗೂ ನಗರದ ಬೊಳ್ವಾರು ಜಂಕ್ಷನ್‌ನಲ್ಲಿರುವ ವೃತ್ತವೊಂದಕ್ಕೆ ವೀರ ಸಾವರ್ಕರ್ ವೃತ್ತ ಎಂಬ ಬ್ಯಾನರ್ ಹಾಕಿರುವುದು ಕಂಡುಬಂದಿದೆ.
![ಪುತ್ತೂರಿನ ವೃತ್ತಗಳಲ್ಲಿ ದಿಢೀರನೆ ಕಾಣಿಸಿಕೊಂಡ 'ವೀರ ಸಾವರ್ಕರ್ ವೃತ್ತ' ಬ್ಯಾನರ್ Veera savarkar banner](https://etvbharatimages.akamaized.net/etvbharat/prod-images/768-512-11:58-kn-mng-01-banar-alavadike-puttur-photos-script-kac10010-08062020203315-0806f-1591628595-276.jpg)
Veera savarkar banner
ನಗರದ ಸರ್ಕಾರಿ ಅಸ್ಪತ್ರೆಯ ಬಳಿಯ ವೃತ್ತ ಹಾಗೂ ನಗರದ ಬೊಳ್ವಾರು ಜಂಕ್ಷನ ಲ್ಲಿರುವ ವೃತ್ತವೊಂದಕ್ಕೆ ವೀರ ಸಾವರ್ಕರ್ ವೃತ್ತ ಎಂಬ ಬ್ಯಾನರ್ ಹಾಕಿದ್ದು ಕಂಡುಬಂದಿದ್ದು, ಹಿಂದೂ ಕಾರ್ಯಕರ್ತರ ಕೆಲಸವಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ.
ಕೆಲದಿನಗಳ ಹಿಂದೆ ಯಲಹಂಕದ ಮೇಲ್ಸೇತುವೆಗೆ ವೀರ ಸಾವರ್ಕರ್ ಎಂಬ ಹೆಸರಿಡುವ ಬಗ್ಗೆ ವಿವಾದ ಉಂಟಾಗಿತ್ತು. ಆ ಬಳಿಕ ಮಂಗಳೂರಿನಲ್ಲಿ ಪಂಪ್ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಮೇಲ್ಸೇತುವೆ ಎಂದು ಬ್ಯಾನರ್ ಹಾಕಲಾಗಿತ್ತು.