ಕರ್ನಾಟಕ

karnataka

ETV Bharat / state

ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಪರಿಹಾರ ಧನ ಘೋಷಣೆ ಬಗ್ಗೆ ಚರ್ಚೆ: ಶಾಸಕ ವೇದವ್ಯಾಸ ಕಾಮತ್ - ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಪರಿಹಾರ

ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

veda vyasa kamath
ಶಾಸಕ ವೇದವ್ಯಾಸ ಕಾಮತ್

By

Published : Dec 2, 2020, 2:19 AM IST

ಮಂಗಳೂರು: ನಗರದ ಧಕ್ಕೆ ಅಳಿವೆಬಾಗಿಲು ಸಮೀಪ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರಿನ ಧಕ್ಕೆಗೆ ಭೇಟಿ ನೀಡಿದ ವೇಳೆ ಮಾತನಾಡಿದ‌ ಶಾಸಕ ವೇದವ್ಯಾಸ ಕಾಮತ್, ದೋಣಿ ದುರಂತಕ್ಕೀಡಾಗಿರುವ‌ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದ್ದು, ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು ಕಣ್ಮರೆಯಾಗಿರುವ ಮೀನುಗಾರರ ಶೋಧ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ..ಮಂಗಳೂರು ಬೋಟ್ ದುರಂತದಲ್ಲಿ ಇನ್ನೂ ಪತ್ತೆಯಾಗದ ನಾಲ್ವರು.. ಶೋಧ ಕಾರ್ಯ ನಾಳೆಗೆ‌ ಮುಂದೂಡಿಕೆ

ಪರಿಹಾರದ ಕುರಿತು ಈಗಾಗಲೇ ಮೀನುಗಾರಿಕಾ ಸಚಿವರೊಂದಿಗೆ ಚರ್ಚಿಸಿದ್ದೇನೆ. ಸಚಿವರ ಮೂಲಕ ಮುಖ್ಯಮಂತ್ರಿಗಳಿಗೂ ವಿಚಾರ ತಿಳಿಸಿದ್ದೇವೆ. ತಕ್ಷಣವೇ ಪರಿಹಾರ ಧನ ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details