ಕರ್ನಾಟಕ

karnataka

ETV Bharat / state

ಬೀಡಿ ಕೈಗಾರಿಕೆಗೆ ಮಾರಕವಾಗುತ್ತಿರುವ ಕೊಟ್ಪಾ ಕಾಯ್ದೆ ತಿದ್ದುಪಡಿ ರದ್ದಾಗಲಿ : ವಸಂತ ಆಚಾರಿ - cotpa act issue

2020ರಲ್ಲಿ ಮತ್ತೆ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲದಂತೆ ಎರಡೂ ಸರ್ಕಾರಗಳು ವರ್ತಿಸುತ್ತಿವೆ..

vasantha achari pressmeet about cotpa act
ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಸುದ್ದಿಗೋಷ್ಟಿ ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಸುದ್ದಿಗೋಷ್ಟಿ

By

Published : Feb 19, 2021, 7:56 AM IST

ಮಂಗಳೂರು :ಜನತೆಯ ಆರೋಗ್ಯ ಕಾಳಜಿ ಮುಂದಿರಿಸಿ ಜಾರಿಗೆ ತಂದಿರುವ ಕೊಟ್ಪಾ ಕಾಯ್ದೆಯನ್ನು ವರ್ಷದಿಂದ ವರ್ಷಕ್ಕೆ ಕಠಿಣಗೊಳಿಸಲಾಗುತ್ತಿದೆ. ಇದರಿಂದ ನಾಲ್ಕು ಕೋಟಿಯಷ್ಟು ಜನರಿಗೆ ಉದ್ಯೋಗ ನೀಡಿರುವ ಬೀಡಿ ಕೈಗಾರಿಕೆಗೆ ಮಾರಕವಾಗಿದೆ ಎಂದು ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಹೇಳಿದರು.

ಬೀಡಿ ಕೈಗಾರಿಕೆ ಕುರಿತಂತೆ ಸಿಐಟಿಯು ಅಧ್ಯಕ್ಷ ವಸಂತ ಆಚಾರಿ ಮಾತನಾಡಿರುವುದು..
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಟ್ಪಾ ಕಾಯ್ದೆ ಜಾರಿಗೆ ತಂದು ನಿಧಾನವಾಗಿ ಬೀಡಿ ಉದ್ಯಮ ನಾಶಗೊಳಿಸುವ ಕಾರ್ಯ ಮಾಡುತ್ತಿದೆ. 2020ರಲ್ಲಿ ಮತ್ತೆ ಕೊಟ್ಪಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲದಂತೆ ಎರಡೂ ಸರ್ಕಾರಗಳು ವರ್ತಿಸುತ್ತಿವೆ. ಇದಕ್ಕೆ ಪ್ರತಿರೋಧ ಒಡ್ಡುವ ರೀತಿ ಜಿಲ್ಲೆಯ ಸಂಸದರು, ಶಾಸಕರು ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಕೊಟ್ಪಾ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಅಭಿಯಾನ ನಡೆಸಿವೆ. ಈ ಮೂಲಕ ಕೇಂದ್ರದ ಆರೋಗ್ಯ ಸಚಿವರು ಹಾಗೂ ಪ್ರಧಾನಿಯವರಿಗೆ 2003ರ ಕೊಟ್ಪಾ ತಿದ್ದುಪಡಿಗೆ ಇನ್ನಷ್ಟು ತಿದ್ದುಪಡಿ ತರುವ ಅಗತ್ಯವಿಲ್ಲ.
ಒಂದು ವೇಳೆ ಇನ್ನಷ್ಟು ಕಠೋರ ತಿದ್ದುಪಡಿ ತಂದಲ್ಲಿ ಇಡೀ ದೇಶದಲ್ಲಿಯೇ ಬೀಡಿ ಕೈಗಾರಿಕೆ ನಿರ್ಣಾಮವಾಗಲಿದೆ ಎಂದು ಮನವಿ‌ ಕಳುಹಿಸಲಾಗಿದೆ ಎಂದು ವಸಂತ ಆಚಾರಿ ಹೇಳಿದರು.
ಆದ್ದರಿಂದ ಈ ಕೋಟ್ಪಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಲ್ಲೆಯ ನಾಲ್ಕು ಕಾರ್ಮಿಕ ಸಂಘಟನೆಗಳು ಹಾಗೂ ಗುತ್ತಿಗೆದಾರರ ಸಂಘಟನೆಗಳು ಜಂಟಿಯಾಗಿ ಫೆ.25ರಂದು ಪ್ರತಿಭಟನಾ ಸಭೆ ಆಯೋಜಿಸಿವೆ. ಅಂದು ಬೆಳಗ್ಗೆ 10.30ಕ್ಕೆ ನಗರದ ಬಲ್ಮಠದಲ್ಲಿರುವ ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆ ನೆಹರೂ ಮೈದಾನದವರೆಗೆ ಸಾಗಿ ಅಲ್ಲಿ 11 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವಸಂತ ಆಚಾರಿ ಹೇಳಿದರು.

ABOUT THE AUTHOR

...view details